More

    ಗದಗ ಹಬ್ಬ ಆಯೋಜನೆ ಮಾದರಿ ಕಾರ್ಯ

    ದಗ: ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಅನುದಾನವಿಲ್ಲದೆ ಸ್ವಂತ ಹಣದಲ್ಲಿ ಬಿಜೆಪಿ ಯುವ ಮುಖಂಡ ಅನೀಲ ಮೆಣಸಿನಕಾಯಿ ಅವರು ಹಮ್ಮಿಕೊಂಡಿರುವ ಐದು ತಿಂಗಳ ಅವಧಿಯ ಗದಗ ಹಬ್ಬ ಮಾದರಿ ಕಾರ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

    ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗದಗ ಹಬ್ಬದ ಲಾಂಛನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸರ್ಕಾರ ಮಾಡದಂತಹ ಕೆಲಸವನ್ನು ಮಾಡುತ್ತಿರುವ ಅನೀಲ ಮಾಡುತ್ತಿದ್ದು, ನಾವೆಲ್ಲರೂ ಅವರಿಗೆ ಬೆಂಬಲ ನೀಡೋಣ ಎಂದರು.

    ಕರೊನಾ ಸಮಯದಲ್ಲಿ ಸಾವಿರಾರು ಜನರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿ ಕ್ಷೇತ್ರಾದ್ಯಂತ ಸಂಚರಿಸಿ ಆಹಾರ ಪದಾರ್ಥ ಸಂಗ್ರಹಿಸಿ, 15 ಸಾವಿರ ಕುಟುಂಬಗಳಿಗೆ ನೆರವಾದರು. ಸರ್ಕಾರಿ ಆಸ್ಪತ್ರೆಗಳಿಗೆ ಉಪಕರಣಗಳನ್ನು ಕೊಡುಗೆಯಾಗಿ ನೀಡಿ ರೋಗಿಗಳಿಗೂ ಉಪಕಾರ ಮಾಡಿದ್ದು ಸಣ್ಣ ಕೆಲಸವಲ್ಲ ಎಂದರು.

    ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಆಟವನ್ನೂ ಕಲಿಸಬೇಕು. ಆದರೆ, ಇತ್ತೀಚೆಗೆ ದಿನಗಳಲ್ಲಿ ಮಕ್ಕಳಿಗೆ ಬರೀ ಪಾಠವೇ ಮುಖ್ಯವಾಗಿದೆ. ಅಂಕ ಗಳಿಸುವುದು ಮಕ್ಕಳಿಗಿಂತ ಪಾಲಕರಿಗೆ ಪ್ರತಿಷ್ಠೆಯಾಗಿದೆ. ಇಂತಹ ಸಂದರ್ಭದಲ್ಲಿ ಗದಗ ಹಬ್ಬ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇಲ್ಲಿ ನೆರೆದಿರುವ ಮಕ್ಕಳ ಮುಖದಲ್ಲಿ ಕಾಣುತ್ತಿರುವ ನಗುವಿಗೆ ಗದಗ ಹಬ್ಬ ಪ್ರೇರಣೆ ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ ಮಾತನಾಡಿದರು. ಗದಗ ಹಬ್ಬದ ರೂವಾರಿ ಅನೀಲ ಮೆಣಸಿನಕಾಯಿ ಮಾತನಾಡಿ, ಗದಗ ಹಬ್ಬದ ಆಯೋಜನೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts