More

    ಗದಗ: ಲಕ್ಕುಂಡಿಯಲ್ಲಿ ಭೂಗರ್ಭ ಸಂಶೋಧನೆ ನಡೆಯಬೇಕು: ಡಿ.ವಿ. ಬಡಿಗೇರ

    ಗದಗ: ಲಕ್ಕುಂಡಿ ಭೂಗರ್ಭದಲ್ಲಿ ಪುರಾತತ್ವ ಇಲಾಖೆ ಸಂಶೋಧನೆ ನಡೆಸಿದರೆ ಇಲ್ಲಿನ ಇತಿಹಾಸ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬಹುದು ಎಂದರು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು.

    ಲಕ್ಕುಂಡಿಯ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿ, ಲಕ್ಕುಂಡಿ ಇತಿಹಾಸದ ಕುರಿತು ಇನ್ನೂ ಸಂಶೋಧನೆ ಜರುಗಬೇಕು. ಈಗ ಹೊರಬಂದಿರು ಇತಿಹಾಸ ಕೇವಲ ಶೇ.20% ಮಾತ್ರ. ಬಸವಣ್ಣನವರು ಲಕ್ಕುಂಡಿಗೆ ಬಂದು ಹೋದರು ಎಂಬುದು ಸತ್ಯ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಇತಿಹಾಸದಲ್ಲಿ ಬೆಳಕಲ್ಲಿ ವರ್ತಮಾನ ಕಟ್ಟಬೇಕಿದೆ ಎಂದರು.

    ಕವಿಗಳ ಕುರಿತು ಮಾತನಾಡಿ, ಕವಿಗಳು ಧನಿ ಅಡಗಿದವರ ಧನಿಯಾಗಿ ಇರಬೇಕು. ಅದರಂತೆ ಕವಿಯ ಹೃದಯಕ್ಕೆ ಮಿಡಿಯುವ ಜನರು ಇರಬೇಕಾದ ಅವಶ್ಯಕತೆ ಇದೆ. ವಿಡಂಬನೆ ಜತೆಗೆ ಸತ್ಯವನ್ನು ಹೇಳವುದ ಧೈರ್ಯವಂತಿಕೆ ಕವಿಗಳಿಗೆ ಇರಬೇಕು ಎಂದು ಕುವೆಂಪು ಹಾಗೂ ದುಂಡಿರಾಜ ಅವರ ಕವಿತೆಗಳನ್ನು ವಾಚಿಸಿದರು.

    ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಎಲ್ಲ ಕವಿಗಳು ತಮ್ಮ ಅಭಿಪ್ರಾಯ, ಸಮಾಜದ ಡೊಂಕು ತಿದ್ದುವ, ಐತಿಹ್ಯ ಕುರಿತು ಕವಿತೆ ಹೇಳಿ ಕಾವ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದರು.

    ದಾನ ಚಿಂತಾಮಣಿ ಕ್ಷತ್ರಿಯ ಕುಲದವಳು. ಆದರೆ ಅವಳ ಧರ್ಮ ಜೈನ. ಸಮಾಜದಲ್ಲಿ ‘ವಿಧವೆ’ ಎಂಬ ಪದವನ್ನು ವಿರೋಧಿಸಿದ ಧೀರೆ ಎಂದು ಶ್ಯಾಮಸುಂದರ ಹೇಳಿದರು.

    ಪ್ರೀತಿಯ ಮೂಲವೇ ಮೋಡ, ಅಕ್ಕ ಮಹಾದೇವಿಯ ವೈರಾಗ್ಯ ನಮಗೇಕಿಲ್ಲ, ಅವ್ವ ಎಂಬುದನ್ನು ನೆಲಕ್ಕೆ ಹೋಲಿಕೆ, ಹೀಗೆ ಮಾಡಿ ವಿವಿಧ ಭಾವನೆಗಳನ್ನು ವ್ಯಕ್ತ ಪಡಿಸುವ ಮೂಲಕ ಕವಿಗಳು ಕವಿತೆಗಳ ಶ್ರೀಮಂತಿಕೆ ಮರೆದರು ಎಂದರು.

    ಕಾರ್ಯಕ್ರಮದಲ್ಲಿ ಮೋಡದ ಮಾತು, ಅಕ್ಕ, ನೆಲ, ಭಾವ ಸಮ್ಮಾದಿ, ನನ್ನ ನಾಡು ನನ್ನ ಹೆಮ್ಮೆ, ಕರುಳ ಧನಿ, ಕವಿತೆಯೆಂದರೆ, ಪ್ರೇಮ ನಿವೇದನೆ, ದಾನಕಣ್ಮನಿ, ಅವ್ವನ ಕೈ ರುಚಿ ಅಮೃತ, ನಿಮ್ಮ ಯುದ್ಧ, ಹೆಣ್ಣು, ಸಂಕ್ರಾಂತಿ ಸಂಕಟ, ನಾನು ಮತ್ತು ನನ್ನ ಕವಿತೆ, ಅಳಿವು, ಜ್ಞಾನ ಯೋಗಿ ಅಸ್ತಗಂತ ಸೇರಿದಂತೆ 19 ಕವನಗಳನ್ನು ವಾಚಿಸಿದರು.

    ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದ ಪಾಟೀಲ, ಸುಶೀಲಾ ಬಿ ಇತರರು ಇದ್ದರು

    ಫೋಟೋ
    ಲಕ್ಕುಂಡಿಯ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಶನಿವಾರ ಜರುಗಿದ ಕವಿಗೋಷ್ಠಿಯಲ್ಲಿ ವಿಮರ್ಶಕ ಶ್ಯಾಮಸುಂದರ ಮಾತನಾಡಿದರು. ಡಿ.ವಿ. ಬಡಿಗೇರ, ವಿವೇಕಾನಂದಗೌಡ ಪಾಟೀಲ, ಸುಶೀಲಾ ಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts