More

    ಗದಗ: ರೌಡಿ ಶೀಟರ್ ಬಂಧನ, ಬಳ್ಳಾರಿ ಜೈಲಿಗೆ ಶಿಫ್ಟ್

    ಗದಗ: ಪೊಲೀಸ್ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದ ಖತರ್ನಾಕ್ ಗೂಂಡಾ, ರೌಡಿ ಶೀಟರ್ ಅಬ್ದುಲ್ ರಜಾಕ್ ಆಡೂರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಆರೋಪಿಯನ್ನು ಬಳ್ಳಾರಿ ಜೈಲಿನ ಕಂಬಿ ಎಣಿಸುವಂತೆ ಮಾಡಿದ್ದಾರೆ.

    ಆತನ ಉಪಟಳಕ್ಕೆ ಪೊಲೀಸ್ ಸಿಬ್ಬಂದಿಯೂ ಕಂಗಾಲಾಗಿದ್ದರು. ಅಧಿಕಾರಿಗಳ ಮೇಲೂ ದರ್ಪ ತೋರಿಸುತ್ತಿದ್ದ. ಈ ಗೂಂಡಾನನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಕೊಚ್ವಿ ಹಾಕುತ್ತೇನೆ ಅಂತ ಅವಾಜ್ ಹಾಕಿದ್ದನಂತೆ. ಅಷ್ಟೇ ಅಲ್ಲದೆ, ಪೊಲೀಸರ ಮೇಲೆಯೇ ಇಡೀ ಕುಟುಂಬದ ಸದಸ್ಯರು ಹಲ್ಲೆ ಮಾಡಿ, ಪಿಎಸ್ಐ ಕಾಲಿಗೆ ಗಾಯಗೊಳಿಸಿ ನಾಪತ್ತೆಯಾಗಿದ್ದರು. ಆದರೆ, ಸಿನಿಮೀಯ ರೀತಿಯಲ್ಲಿ ನಟೋರಿಯಸ್ ರೌಡಿಯನ್ನು ಅಟ್ಯಾಕ್ ಮಾಡಿ ಬಳ್ಳಾರಿ ಜೈಲಿಗೆ ಅಟ್ಟಿದ್ದಾರೆ.

    ಈ ಮೊದಲು ಜಿಲ್ಲಾಧಿಕಾರಿಗಳ ಆದೇಶದಂತೆ ಗೂಂಡಾಕಾಯ್ದೆಯಡಿ ಬಂಧಿಸಲು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಮನೆಗೆ ಹೋದಾಗ ಪೊಲೀಸರ ಜತೆ ಗಲಾಟೆ ಮಾಡಿದ್ದ. ಇತ್ತಿಚೆಗೆ ಇತನ ಉಪಟಳ ಹೆಚ್ಚಾದಾಗ, ಜಿಲ್ಲಾಧಿಕಾರಿ ವೈಶಾಲಿ ಎಂ ಎನ್ ಅವರು, ಗೂಂಡಾಕಾಯ್ದೆಯಡಿ ಬಂಧಿಸುವಂತೆ ಆದೇಶ ಮಾಡಿದ್ದರು. ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ ನೇತೃತ್ವದಲ್ಲಿ, ಅಬ್ದುಲ್ ಆಡೂರನನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ‌ ಮಾಡಿದ್ದ, ತನ್ನ ರೌಡಿ ಶೀಟರ್ ಗ್ಯಾಂಗ್ ಕಟ್ಟಿಕೊಂಡು, ಕೊಚ್ಚಿ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದ. ಆದಾದ ನಂತ್ರ ಲಕ್ಷ್ಮೇಶ್ವರ ಪೊಲೀಸರು ಅಬ್ದುಲ್ ಆಡೂರ ಐದು ಜನ ಸಹೋದರರನ್ನು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ರು. ಆದ್ರೆ ಪ್ರಮುಖ ಆರೋಪಿ ಅಬ್ದುಲ್ ಆಡೂರ ಪೊಲೀಸರಿಗೆ ಚೆಳ್ಳಿಹಣ್ಣು ತಿನ್ನಿಸಿ, ನಾಪತ್ತೆಯಾಗಿದ್ದ.‌ ಇದು ಲಕ್ಷ್ಮೇಶ್ವರ ಪೊಲೀಸರಿಗೆ ಚಾಲೆಂಜ್ ಆಗಿತ್ತು. ಹೀಗಾಗಿ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದಲ್ಲಿ ವಿಶೇಷ ತಂಡ ರಚನೆ ಶೀಘ್ರ ಬಂಧಿಸುವಂತೆ ಸೂಚಿಸಿದ್ದರು. ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಪ್ರಕಾಶ್ ನೇತೃತ್ವದ ತಂಡ ಬಾಂಬೆ, ಪುಣೆ ಶೋಧ ಮಾಡಿದ್ದರು. ಆದ್ರೆ, ಹುಬ್ಬಳಿಯಲ್ಲಿ ನಟೋರಿಯಸ್ ಅಬ್ದುಲ್ ರಜಾಕ್ ಆಡೂರನನ್ನು ಪೊಲೀಸರು ಬಲಗೆ ಹಾಕಿದ್ದಾರೆ.

    ಪ್ರಕರಣ ಏನು?
    ಜನೆವರಿ 30 ರಂದು ಗೂಂಡಾ ಕಾಯ್ದೆಯಡಿ ಬಂಧಿಸಲು ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ ತೆರಳಿದಾಗ ಅಬ್ದುಲ್ ಆಡೂರ್ ಹಾಗೂ ಸಹೋದರರು ಸೇರಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ನಾಪತ್ತೆಯಾಗಿದ್ದರು. ರೌಡಿ ಶೀಟರ್ ನಗರಸಭೆ ಸದಸ್ಯ ಫೀರ್ದೋಷ ಆಡೂರ್, ಅಬ್ದುಲ್ ಸತ್ತಾರ, ಸುಲೇಮಾನ್ ಆಡೂರ, ನಿಜಾಮ್ ಆಡೂರ, ಜಾಫರ್ ಹೀಗೆ ಐದು ಜನ್ರನ್ನು ಜನೆವರಿ 31 ರಂದು ಬಂಧಿಸಿದ್ದರು. ಆದ್ರೆ, ಪ್ರಮುಖ ಆರೋಪಿ ಅಬ್ದುಲ್ ಆಡೂರ್ ತಪ್ಪಿಸಿಕೊಂಡಿದ್ದ. ಮುಂಬಯಿ ಸೇರಿದಂತೆ ಹಲವು ರಾಜ್ಯಗಳಲ್ಲಿ ದುಬಾರಿ ಬೆಲೆಯ ಕಾರಿನಲ್ಲಿ ಸಂಚಾರ ಮಾಡುತ್ತಿದ್ದ. 10 ನಿಮಿಷಕ್ಕೆ ಒಂದು ಬಾರಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಪೊಲೀಸರ ದಾರಿ ತಪ್ಪಿಸುತ್ತಿದ್ದ. ಪೊಲೀಸರು ಒಂದು ಪ್ರದೇಶಕ್ಕೆ ಹೋಗುವಷ್ಟರಲ್ಲಿ, ಮತ್ತೊಂದು ಪ್ರದೇಶಕ್ಕೆ ಪರಾರಿ ಆಗುತ್ತಿದ್ದ. ಐದಾರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಕೊನಗೆ ಹುಬ್ಬಳ್ಳಿ ಸಮೀಪ ರೌಡಿ ಅಬ್ದುಲ್ ಆಡೂರನನ್ನು ಪೊಲೀಸರು ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts