More

    ಗದಗ: ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದುಪಯೋಗ ಪಡೆಸಿಕೊಳ್ಳಬೇಕು: ಗಣೇಶ ಬಿ.

    ಗದಗ: ಮಹಿಳಾ ಸಬಲೀಕರಣ, ಸ್ವಾವಲಂಬನೆ ಬದುಕು, ಉದ್ಯೋಗ ಸೃಷ್ಟಿ ಸೇರಿದಂತೆ ನಾನಾ ಅಭಿವೃದ್ದಿ ಯೋಜನೆಗಳ ಹುಟ್ಟಿಗೆ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ದಂಪತಿಗಳು ಕಾರಣರಾಗಿದ್ದಾರೆ ಎಂದು ಸಂದ ಪ್ರಾದೇಶಿಕ ನಿರ್ದೇಶಕ ಗಣೇಶ ಬಿ. ಅವರು ಹೇಳಿದರು.
    ನಗರದ ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಜರುಗಿದ ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್​ ಗದಗ, ಪಂಚಾರಿ ನಗರ ವಲಯದ ಪ್ರಗತಿ ಬಂದು ಸ್ವಸಹಾಯ ಸಂಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಇಂದಿನ ಒತ್ತಡದ ಬದುಕಿನಲ್ಲಿ ಸಮಯವನ್ನು ಮೀಸಲಿಟ್ಟು ಕೆಲಸ ಮಾಡುವುದರ ಜೊತೆಗೆ ಆಥಿರ್ಕ ಸ್ವಾವಲಂಬಿ ಬದುಕಿಗಾಗಿ ಸ್ವಸಹಾಯ ಸಂದ ಕಾರ್ಯ ಚಟುವಟಿಕೆ ಪಾಲ್ಗೊಂಡು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಂಚಾರಿ ನಗರ ವಲಯದ ಪ್ರಗತಿ ಬಂದು ಸ್ವಸಹಾಯ ಸಂಗಳು ಈವರೆಗೆ 8 ಕೋಟಿ ವ್ಯವಹಾರ ಮಾಡಿದ್ದು ನಿಗದಿತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡುವಲ್ಲಿ ಮುಂಚೂಣಿಯಲ್ಲಿರುವುದು ಸ್ವಾಗತಾರ್ಹ ಎಂದು ಹೇಳಿದರು.
    ಸಾನ್ನಿದ್ಯವಹಿಸಿದ್ದ ಗದಗ&ವಿಜಯಪುರ ರಾಮಕೃಷ್ಣ ಆಶ್ರಮದ ಪೂಜ್ಯ ನಿರ್ಭಯಾನಂದ ಶ್ರೀಗಳು ಪ್ರಾಸ್ತಾವಿಕ ಮಾತನಾಡಿದರು.
    ಪಂಚಾರಿ ನಗರದ ವಲಯ ಮೇಲ್ವಿಚಾರಕ ಚಂದ್ರಶೇಖರ ಡಿ ಅವರು ವರದಿ ವಾಚಿಸಿ ಈ ವಲಯವು ಎಂಟು ಕಾರ್ಯೇತ್ರಗಳನ್ನು ಒಳಗೊಂಡು ಒಬ್ಬ ಮೇಲ್ವಿಚಾರಕರು, ಎಂಟು ಜನ ಸೇವಾಪ್ರತಿನಿಧಿಗಳು ನಾಲ್ಕು ಜನ ವಿಎಲ್​ಇಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ 336 ಸ್ವಸಹಾಯ ಸಂಗಳ ಮೂಲಕ 3125 ಸದಸ್ಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇದುವರೆಗೂ 27.39 ಲ ರೂಗಳನ್ನು ಉಳಿತಾಯ ಮಾಡಿದ್ದಾರೆ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯ ಚಂದ್ರು ಬಾಳಿಹಳ್ಳಿಮಠ, ಕೃಷ್ಣಾಪುರ ಹೊಲಗಾಲುವೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಜಿ. ಸಂತೋಜಿ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ. ಹಾತಲಗೇರಿ ಗ್ರಾಪಂ ಅಧ್ಯೆ ಮಹಾದೇವಿ ಮೇಲ್ಮನಿ, ನಿವೃತ್ತ ಪ್ರಾಚಾರ್ಯ ಕವಿತಾ ಕಾಶಪ್ಪನವರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts