More

    ಗದಗ: ಬಟ್ಟೂರು ಕ್ರಾಸ್: ಬ್ಯಾಂಕ್ ನಿಂದ ನೋಟಿಸ್, ರೈತರ ನೋವು

    ಗದಗ: ಸಾಲ ಮರುಪಾವತಿ ಮಾಡದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ನೋಟೀಸ್ ನೀಡುತ್ತಿದ್ದಾರೆ. ಭಯಕ್ಕೆ ನಿದ್ದೆ ಬರುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಒಂದೇ ಮಾರ್ಗ ಉಳಿದಿದೆ ಎಂದು ರೈತರು ಕೇಂದ್ರ ಅದ್ಯಯನ ತಂಡದ ಮುಂದೆ ನೋವು ತೋಡಿಕೊಂಡಿದ್ದಾರೆ.

    ಶಿರಹಟ್ಟಿ ತಾಲೂಕಿನ ಬಟ್ಟೂರು ಕ್ರಾಸ್ ಬಳಿಯ ರೈತರ ಹೊಲಗಳಲ್ಲಿ ಕೇಂದ್ರ ಅಧ್ಯಯನ ತಂಡವು ಶೇಂಗಾ ಬೆಳೆ ವೀಕ್ಷಣೆ ಮಾಡುವ ಸಂದರ್ಭದಲ್ಲಿ ರೈತರು ನೋವು ಆಲಿಸಿದರು. ಈ ವೇಳೆ ಬ್ಯಾಂಕ್ ಸಾಲದ ಕುರಿತು ರೈತರು ಮಾಹಿತಿ ನೀಡಿದರು. ದನಕರುಗಳನ್ನು ಮಾರಾಟ ಮಾಡಿ ಸಾಲ ತೀರಿಸುವ ಪರಿಸ್ಥಿತಿ ಎದುರಾಗಿದೆ ಎಂದರು.

    ಸಾಮಾನ್ಯ ಮಳೆಗಾಲದಲ್ಲಿ ಒಂದು ಶೇಂಗಾ ಬಳ್ಳಿಯಲ್ಲಿ 60 ರಿಂದ 70 ಶೇಂಗಾ ಕಾಯಿ ಇಳುವರಿ ಬರುತ್ತದೆ. ಈಗ ಎರಡರಿಂದ ಮೂರು ಶೇಂಗಾ ಕಾಯಿ ಇಳುವರಿ ಬಂದಿದೆ ಎಂದು ಶೇಂಗಾ ಬೆಳೆ ನಾಶವಾಗಿದ್ದನ್ನು ಅಧಿಕಾರಿಗಳಿಗೆ ತೋರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts