More

    ಗದಗ: ತೋಂಟದ ಸಿದ್ಧಲಿಂಗ ಶ್ರೀಗಳು ವಿಶ್ವಮಾನವ ತತ್ವವನ್ನು ಸಾರಿದ ಶ್ರೇಷ್ಠ ಸಂತರು: ಎಂ.ಎಸ್​ ಆಶಾದೇವಿ

    ಗದಗ: ಸಮಾಜದಲ್ಲಿ ಅಶಾಂತಿಯನ್ನೆಬ್ಬಿಸುವ, ಜನರಲ್ಲಿ ವೈಮನಸ್ಸು ಮೂಡಿಸುವ ಭಿನ್ನತೆಯ ಗೋಡೆಗಳನ್ನು ಕೆಡವಿಹಾಕಿದ ಸಿದ್ದಲಿಂಗ ಶ್ರೀಗಳು ವಿಶ್ವಮಾನವ ತತ್ವವನ್ನು ಸಾರಿದ ಶ್ರೇಷ್ಠ ಸಂತರಾಗಿದ್ದರು ಎಂದು ಖ್ಯಾತ ವಿಮರ್ಶಕಿ ಎಂ.ಎಸ್​ ಆಶಾದೇವಿ ಹೇಳಿದರು.
    ನಗರದ ತೋಂಟದಾರ್ಯ ಮಠದಲ್ಲಿ ಮಂಗಳವಾರ ಜರುಗಿದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ 74ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ನೇರ ಮಾತುಗಳಿಗೆ ಶ್ರೀಗಳು ಹೆಸರಾಗಿದ್ದರೂ ಅವರ ವ್ಯಕ್ತಿತ್ವದ ಮೂಲಧಾತು ತಾಯ್ತನವಾಗಿತ್ತು. ಧರ್ಮಗಳ ಆಧಾರದಲ್ಲಿ ಅಲ್ಲದೇ ಭಾರತೀಯತೆಯ ಆಧಾರದಲ್ಲಿ ಒಗ್ಗೂಡಬೇಕೆಂದು ಕರೆ ನೀಡಿದ್ದರು. ಅವರು ಸಹಿಷ್ಣುತೆ&ಸಮಾನತೆ ತತ್ವಗಳ ಪ್ರಬಲ ಪ್ರತಿಪಾದಕರಾಗಿದ್ದರು. ಅವರ ಜೀವನವೇ ಅವರ ಸಂದೇಶವಾಗಿದ್ದು, ತಮ್ಮ ಕಾಲದ ಅಗತ್ಯತೆಗಳನ್ನು, ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಂಡು ಸುಧಾರಣೆಗೆ ಶ್ರಮಿಸಿದ್ದ ಅಪರೂಪದ ಶ್ರೀಗಳಾಗಿದ್ದರು ಎಂದು ಸಿದ್ದಲಿಂಗ ಶ್ರೀಗಳ ಕುರಿತು ವಿವರಿಸಿದರು.
    ಮಾಜಿ ಲೋಕಸಭಾ ಸದಸ್ಯ ಐ.ಜಿ ಸನದಿ ಮಾತನಾಡಿ, ಸರ್ವಧರ್ಮ ಸಮನ್ವಯತೆಯ ಸೂತ್ರ ಅಳವಡಿಸಿಕೊಂಡಿದ್ದ ತೋಂಟದ ಶ್ರೀಗಳು ಪ್ರತಿಯೊಬ್ಬರನ್ನೂ ಅರ್ಥಮಾಡಿಕೊಳ್ಳಬಲ್ಲ ಸೂಕ್ಷ$್ಮಗ್ರಹಿಗಳಾಗಿದ್ದರು. ಪುಸ್ತಕದಿಂದ ಆತ್ಮಾನಂದವಾಗುತ್ತದೆ ಎನ್ನುತ್ತಿದ್ದ ಅವರು ಹಾರ&ತುರಾಯಿಗಳ ಜೊತೆಗೆ ಗ್ರಂಥವನ್ನು ನೀಡುವ ಪರಂಪರೆಗೆ ನಾಂದಿ ಹಾಡಿದರು ಎಂದರು.
    ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖಿ ಸಂಪುಟ&2, ಡಿ. ರಾಮನಮಲಿ ಸಂಪಾದಿಸಿದ ಮೌನಸಾಧಕ, ಡಾ.ವೀರಣ್ಣ ದಂಡೆ ರಚಿಸಿದ ಸ್ಥಾವರ ಜಂಗಮ, ಡಾ. ಮಹೇಶ ಗುರುನಗೌಡರ ಬರೆದ ಸಿದ್ಧಣ್ಣ ಮಸಳಿ ಸೇರಿದಂತೆ ಹಲವರು ಗ್ರಂಥಗಳು ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡವು.
    ಹಂದಿಗುಂದ ಸಿದ್ಧೇಶ್ವರಮಠದ ಶಿವಾನಂದ ಶ್ರೀಗಳನ್ನು ಸನ್ಮಾನಿಸಲಾಯಿತು.
    ತೋಂಟದ ಸಿದ್ಧರಾಮ ಶ್ರೀಗಳು, ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು, ಎಸ್​.ಎಸ್​ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಕಾರ್ಯಕ್ರಮಕ್ಕೂ ಮುನ್ನ ನಗರಾದ್ಯಂತ ಭಾವೈಕ್ಯತಾ ನಡುಗೆ ಮೆರವಣಿಗೆ ಜರುಗಿತು.
    ಬೈರನಹಟ್ಟಿ ಶಾಂತಲಿಂಗ ಶ್ರೀಗಳು, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಮಾಜಿ ಸಚಿವ ಎಸ್​.ಎಸ್​ ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂದ ಅಧ್ಯ ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ ಕೋಟ್ರೇಶ್​ ಮೆಣಸಿನಕಾಯಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts