More

     ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಡಬಾಲಿ ಕ್ರೀಡಾಂಗಣದಲ್ಲಿ ಪ್ರಜಾಧ್ವನಿ ಯಾತ್ರೆ

     ಗದಗ: ರಾಜ್ಯದಲ್ಲಿ ಆರಂಭವಾಗಿರುವ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಗುರುವಾರ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಡಬಾಲಿ ಕ್ರೀಡಾಂಗಣದಲ್ಲಿ ಜರುಗಿತು. 2023 ರ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಜಿಲ್ಲೆಯಲ್ಲಿ ಜರುಗಿದ ಎರಡನೇ ಪ್ರಜಾಧ್ವನಿ ಕಾರ್ಯಕ್ರಮ ಇದಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ಮತಬ್ಯಾಂಕ್ ದೃಷ್ಟಿಯಿಂದ ನಾನಾ ತಂತ್ರಗಾರಿಕೆ ರೂಪಿಸುತ್ತಿದೆ. ಇದರ ಭಾಗವಾಗಿ ಗುರುವಾರ ದ ವೇದಿಕೆ ಕಾರ್ಯಕ್ರಮದಲ್ಲೂ ಆಯಾ ಸಮುದಾಯದ ಮುಖಂಡರಿಗೆ ಭಾಷಣಕ್ಕೆ ಅವಕಾಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಶಿರಹಟ್ಟಿ ಭಾಗದಲ್ಲಿ ಲಂಬಾಣಿ, ಮುಸ್ಲಿಂ ಮತದಾರರು ಅಧಿಕವಾಗಿರುವ ಕಾರಣ ಲಂಬಾಣಿ ಸಮುದಾಯದ ಪ್ರಕಾಶ್ ರಾಥೋಡ್, ಸಲೀಂ ಅಹಮ್ಮ, ಜಮೀರ್ ಅಹಮ್ಮದ್ ಅವರಿಗೆ ವೇದಿಕೆ ಮೇಲೆ ಭಾಷಣಕ್ಕೆ ವಿಶೇಷ ಸಮಯಾವಕಾಶ ಕಲ್ಪಿಸಿದರು.‌

    ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಸರ್ಕಾರ ಹಿಂದುಳಿದ, ಅಲ್ಪಸಂಖ್ಯಾತ ವಿರೋಧಿ. ಸಾಮಾಜಿಕ ನ್ಯಾಯ ಒದಗಿಸಲು ಅವರಿಂದ ಸಾದ್ಯವಾಗದು. ಪ್ರಜಾಧ್ವನಿ ಅಂದರೆ ಕಾಂಗ್ರೆಸ್ ಧ್ವನಿಯಲ್ಲ. ರಾಜ್ಯದ ಜನತೆಯ ಧ್ವನಿಯಾಗಿ ಅಧಿಕಾರಕ್ಕೆ ಬಂದು, ಜನರ ಕೆಲಸ ಮಾಡುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

    ಆಪರೇಷನ್‌ ಕಮಲ ಮಾಡಿ, ಶಾಸಕರನ್ನು ಖರೀದಿ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ್ದಾರೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ಅಧಿಕಾರ ಬಂದ ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು. ಶಿರಹಟ್ಟಿ ಕ್ಷೇತ್ರಕ್ಕೆ 18000 ಮನೆಗಳು ಕಾಂಗ್ರೆಸ್ ಸರ್ಕಾರ ನೀಡಿತ್ತು. ಆದರೆ, ಬಿಜೆಪಿ ಒಂದು ಮನೆಯನ್ನು ವಿತರಿಸಿಲ್ಲ ಎಂದು ಆರೋಪಿಸಿದರು.

    40% ಕಮಿಷನ್ ಆರೋಪ ಮತ್ತೆ ಪುನುರುಚ್ಚರಿಸಿದ ಸಿದ್ದರಾಮಯ್ಯ ಕಮಿಷನ್ ಆರೋಪವನ್ನು ಕೇಂದ್ರ ಸರ್ಕಾರ ತನಿಖೆ ಮಾಡಿಲ್ಲವೇಕೆ ಎಂದು ಬಿಜೆಪಿ ವಿರುದ್ಧ ಗುಟರಿದರು.

    ಬಾಕ್ಸ್:

    ರಾಜ್ಯದಲ್ಲಿ ಅಭಿವೃದ್ಧಿ ವಿಚಾರ ಕುರಿತು ಚರ್ಚೆಯಿಲ್ಲ. ಅಬ್ಬಕ್ಕ ವರ್ಸಸ್ ಟಿಪ್ಪು, ಮಹಾತ್ಮ ಗಾಂಧಿ ವರ್ಸಸ್ ಗೂಡ್ಸೆ ವಿಚಾರಗಳನ್ನು ಮುನ್ನಲೆಗೆ ತಂದು ಚುನಾವಣಾ ಗಿಮಿಕ್ ಮಾಡುವುದೇ ಬಿಜೆಪಿ ಕೆಲಸವಾಗಿದೆ. ಈಗಾಗಲೇ ಘೋಷಿಸಿದಂತೆ ಪ್ರತಿ ಮನೆಗೆ 2000 ರೂ, 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ಪಕ್ಷ ಎಡವಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರದೇ ರಾಜೀನಾಮೆ ನೀಡುತ್ತೇನೆ ಎಂದು ನುಡಿದರು.

    ರಾಮಕೃಷ್ಣ ದೊಡ್ಡಮನಿ, ಬಿ.ಆರ್.ಯಾವಗಲ್,  ಎಚ್.ಕೆ. ಪಾಟೀಲ, ಜಿ.ಎಸ್.ಪಾಟೀಲ, ಡಿ.ಆರ್.ಪಾಟೀಲ, ಜಮೀರ್ ಅಹಮ್ಮದ್, ತಿಪ್ಪೇಸ್ವಾಮಿ ಬಿ, ಸಲೀಂ ಅಹಮ್ಮದ್, ಐಜಿ ಸನದಿ,  ಜಿ.ಎಸ್. ಗಡ್ಡದೇವರಮಠ, ಪ್ರಕಾಶ್ ಕರಿ, ಉಮಾಯನ್ ಮಾಗಡಿ, ಸುಜಾತಾ ದೊಡ್ಡಮನಿ ಇತರರು ಇದ್ದರು.

    =========

    ಕೋಟ್:

    ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಶಿರಹಟ್ಟಿಯಲ್ಲಿ 5 ಸಾವಿರಕ್ಕೂ ಹೆಚ್ಚು ವೃದ್ಧಾಪ್ಯರಿಗೆ ಮಾಸಾಶನ ನೀಡುವ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕ್ಷೇತ್ರದ ಜನರು ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಮರೆಯಲು ಸಾಧ್ಯವೇ ಇಲ್ಲ.

    – ಎಚ್.ಕೆ. ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts