More

    ಗದಗ: ಎನ್​.ಎಸ್​.ಎಸ್​ ಸ್ವಯಂಸೇವಕರು ದೇಶಸೇವೆಯ ರಾಯಭಾರಿಗಳು :ಡಾ. ಸಿ. ಎಸ್​. ಹಸಬಿ

    ಗದಗ:
    ದೇಶದ ಸ್ವಚ್ಚತೆಗಾಗಿ ಯುವಕರಿಗೆ ತರಬೇತಿ ನೀಡುವು ಉದ್ದೇಶವನ್ನು ಎನ್​.ಎಸ್​.ಎಸ್​ ವಾಷಿರ್ಕ ಶಿಬಿರಗಳು ಹೊಂದಿವೆ ಎಂದು ಡಾ. ಸಿ. ಎಸ್​. ಹಸಬಿಯವರು ತಿಳಿಸಿದರು.
    ಕೆ.ಎಲ್​.ಇ ಸಂಸ್ಥೆಯ ಮಹಾವಿದ್ಯಾಲಯದ ಎನ್​.ಎಸ್​.ಎಸ್​ ಟಕವು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ವಾಷಿರ್ಕ ವಿಶೇಷ ಎನ್​ಎಸ್​ಎಸ್​ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಯುವಜನತೆಯಲ್ಲಿ ಬಿತ್ತಿ, ಆ ಮೂಲಕ ಗ್ರಾಮಗಳಲ್ಲಿನ ಸಮಸ್ಯೆ ಮತ್ತು ಪರಿಹಾರ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಯೋಚನೆಯ ಜೊತೆಗೆ ಅವುಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂದರು. ಸಮಾಜಸೇವೆ, ಶ್ರದ್ಧೆ, ಒಗ್ಗಟ್ಟು ಇನ್ನೂ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾಥಿರ್ಗಳು ಕಲಿಯಬೇಕು. ಗ್ರಾಮ ಸಂಸತಿಯ ಸಂರ್ಪೂಣ ಪರಿಚಯ ಯುವಜನತೆಗೆ ಸಾಧ್ಯವಾಗುವ ನಿಟ್ಟಿನಲ್ಲಿ ಎನ್​.ಎಸ್​.ಎಸ್​ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
    ರಜನಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಡಾ. ವಿಠ್ಠಲ ಕೋಳಿ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ಹಡಪದ, ಮಂಜುನಾಥ ಮಾಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts