More

    ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ

    ಯಾದಗಿರಿ: ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ಎಲ್ಲರೂ ಅರ್ಥಪೂರ್ಣ ಮತ್ತು ಶಾಂತಿ ಸುವ್ಯವಸ್ಥೆಯೊಂದಿಗೆ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಗಣೇಶ ಹಬ್ಬ ನಿಮಿತ್ತ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವುದರ ಜತೆಗೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.

    ಪಿಒಪಿ ಮತ್ತು ರಾಸಾಯನಿಕ ಬಣ್ಣ ಮಿಶ್ರಿತವಾದ ಗಣೇಶ ಪ್ರತಿಷ್ಠಾಪಿಸದೆ ಪರಿಸರ ಸ್ನೇಹಿ ಗಣೇಶ ಮೂತರ್ಿಯನ್ನೇ ಸ್ಥಾಪಿಸಬೇಕು. ರಸ್ತೆಗಳಲ್ಲಿ ಕೂರಿಸದೆ ವಿಶಾಲವಾದ ಸ್ಥಳದಲ್ಲಿ ಕೂರಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನ ಅಳವಡಿಸಬೇಕು ಎಂದರು.

    ಹಿರಿಯ ನಾಗರಿಕರು, ಮಕ್ಕಳು ಮತ್ತು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಣೇಶ ಮಂಡಳಿಗಳು ನಿಗಾವಹಿಸುವ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಸೂಚಿಸಿದರು.

    ಅಪರ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಡಿವೈಎಸ್ಪಿ ಬಸವೇಶ್ವರ, ಜಿಪಂ ಯೋಜನಾ ನಿದರ್ೇಶಕ ವೆಂಕಟೇಶ ಚಟ್ನಳ್ಳಿ, ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕ ಶಿವಶರಣಪ್ಪ ನಂದಗಿರಿ, ನಗರಸಭೆ ಆಯುಕ್ತ ಶರಣಪ್ಪ, ಯಾದಗಿರಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗಣೇಶ ಮಂಡಳಿ ಸಮಿತಿ ಸದಸ್ಯರಾದ ಸಿದ್ದಪ್ಪ ಹೊಟ್ಟಿ, ಸೋಮಶೇಖರ ಮಣೂರ, ಬಾಬು ದೋಖಾ, ನೂರಂದಪ್ಪ ಲೇವಡಿ, ಸುಭಾಶಚಂದ್ರ ಕೌಲಗಿ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಶಿರವಾರ, ವಾಹಿದ್ ಮಿಯಾ, ಲಾಯಕ್ ಹುಸೇನ್ ಬಾದಲ್, ಖಾಸಿಂ ದೊಡ್ಮನಿ, ವಿಜಯ ಪಾಟೀಲ್, ಸುಭಾಷ ದೇವದುರ್ಗ ಇತರರಿದ್ದರು.

    ಗಣೇಶ ಪ್ರತಿಷ್ಠಾಪಿಸಲು ಪರವಾನಗಿ ಕಡ್ಡಾಯ: ಗಣೇಶ ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪತ್ರ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು. ಅಲ್ಲದೆ ಪೊಲೀಸ್, ಜೆಸ್ಕಾಂ, ನಗರಸಭೆ ಮತ್ತು ಅಗ್ನಿ ಶಾಮಕ ದಳದ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ತಾವು ಪ್ರತಿಷ್ಠಾಪಿಸುವ ಸ್ಥಳದಲ್ಲಿ 10 ಜನರ ಸ್ವಯಂ ಸೇವಕರನ್ನ ನೇಮಕ ಮಾಡಿದ ಪ್ರತಿಯನ್ನು ಸಂಬಂಧಿಸಿದ ತಹಸಿಲ್ ಮತ್ತು ಪೊಲೀಸ್ ಇಲಾಖೆಗೆ ನೀಡಬೇಕು. ಯಾವುದೇ ಕಾರಣಕ್ಕೂ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆ ಮಾಡಕೂಡದು. ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಚಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದರು. ಹಬ್ಬದ ವೇಳೆ ಶಾಂತಿ ಪಾಲನೆಗಾಗಿ ಕೆಲ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts