More

    ಗಣೇಶ ಮೂರ್ತಿ ತಯಾರಕರಿಗೆ ಲಾಕ್​ಡೌನ್ ಬಿಸಿ

    ಗದಗ: ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್​ಡೌನ್ ಹಲವು ವರ್ಗಗಳ ಕೆಲಸವನ್ನೇ ಕಸಿದುಕೊಂಡಿದೆ. ಗಣೇಶ ಮೂರ್ತಿ ತಯಾರಕರಿಗೂ ಲಾಕ್​ಡೌನ್ ಬಿಸಿ ತಟ್ಟಿದೆ.

    ವರ್ಷದಲ್ಲಿ ಆರು ತಿಂಗಳು ಮೂರ್ತಿ ತಯಾರಿಕೆಯಲ್ಲಿ ತೊಡಗುವ ಇವರಿಗೆ ಲಾಕ್​ಡೌನ್ ಸಂಕಷ್ಟಕ್ಕೆ ದೂಡಿದ್ದು, ಬದುಕು ಸಾಗಿಸಲು ಪರದಾಡುವಂತಹ ಸ್ಥಿತಿ ಎದುರಾಗಿದೆ.

    ಗದಗ-ಬೆಟಗೇರಿ ಅವಳಿ ನಗರದ 35 ಜನ ಸೇರಿ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಜನ ಗಣಪತಿ ಮೂರ್ತಿ ತಯಾರಕರಿದ್ದಾರೆ. ಸಾಮಾನ್ಯವಾಗಿ ವರ್ಷದಲ್ಲಿ 6 ತಿಂಗಳು ಗಣಪತಿ ತಯಾರಿಕೆ, ಇನ್ನಾರು ತಿಂಗಳು ಪೇಂಟಿಂಗ್ ಮತ್ತಿತರ ಕೆಲಸ ಮಾಡುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಇದರಲ್ಲಿ ಕೆಲವರು ಕೃಷಿ ಚಟುವಟಿಕೆ, ಸಣ್ಣಪುಟ್ಟ ವ್ಯಾಪಾರ ಮಾಡುವವರೂ ಇದ್ದಾರೆ.

    ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣನ್ನು ಹುಬ್ಬಳ್ಳಿ ಬಳಿಯ ಅಂಚಟಗೇರಿ, ಬೆಂಡಿಗೇರಿ ಹಾಗೂ ಲಕ್ಷೆ್ಮೕಶ್ವರ ಸೇರಿ ವಿವಿಧೆಡೆಯಿಂದ ಸಂಗ್ರಹಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಲಾಕ್​ಡೌನ್​ನಿಂದಾಗಿ ಮಣ್ಣು ತರಲು ಸಾಧ್ಯವಾಗಿಲ್ಲ.

    ಮಳೆಗಾಲವೇ ಕುತ್ತು: ಏಪ್ರಿಲ್, ಮೇ ತಿಂಗಳಲ್ಲಿ ಕೆರೆಯಿಂದ ಜೇಡಿ ಮಣ್ಣನ್ನು ತಂದು ಹದಗೊಳಿಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು. ಸದ್ಯ ಈ ಅವಧಿ ಮೀರಲಾರಂಭಿಸಿದೆ. ಅಲ್ಲದೆ, ಮಳೆ ಕೂಡ ಆರಂಭವಾಗಿದೆ. ಹೀಗಾಗಿ, ಮಣ್ಣು ತರಲು ತೊಂದರೆಯಾಗಿದೆ ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಕ ಮಹೇಶ ಬಡಿಗೇರ.

    ‘ಅಗತ್ಯದಷ್ಟು ಮಣ್ಣು ದೊರೆಯುತ್ತಿಲ್ಲ. ಆದರೆ, ಇದ್ದ ಮಣ್ಣಿನಲ್ಲೇ ಮೂರ್ತಿ ತಯಾರಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಮತ್ತೊಬ್ಬ ಮೂರ್ತಿ ತಯಾರಕ ಮಲ್ಲಿಕಾರ್ಜುನ ಅಣ್ಣಿಗೇರಿ ಬೇಸರ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಒಟ್ಟು 300 ಜನ ಮೂರ್ತಿ ತಯಾರಕರಿದ್ದು, ತಲಾ 2 ಟ್ರ್ಯಾಕ್ಟರ್ ಮಣ್ಣು ಬೇಕಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ಟ್ರ್ಯಾಕ್ಟರ್ ಮಣ್ಣಿಗೆ 4500 ರೂ. ನೀಡಲಾಗುತ್ತಿತ್ತು. ಇದೀಗ 5500-6000 ರೂ. ತೆರಬೇಕಾಗಿದೆ. ಆದರೂ, ಶ್ರಮ ವಹಿಸಿ ಮಣ್ಣು ತಂದು ಮೂರ್ತಿ ಮಾಡಿದರೆ ಕರೊನಾ ಕರಿನೆರಳು ಗಣೇಶ ಹಬ್ಬದ ಮೇಲೆ ಬಿದ್ದರೆ ಹೇಗೆ? ತಯಾರಿಸಿದ ಮೂರ್ತಿಗಳನ್ನು ಏನು ಮಾಡಬೇಕು? ಇದಕ್ಕೆ ಹಾಕಿದ ಹಣ ಮತ್ತು ಶ್ರಮ ವ್ಯರ್ಥವಾದರೆ ಮುಂದೇನು ಎಂಬ ಚಿಂತೆ ಮೂರ್ತಿ ತಯಾರಕರನ್ನು ಕಾಡತೊಡಗಿದೆ. ಇದೇ ಕಾರಣದಿಂದ ಮನೆಯಲ್ಲಿ ಇಡುವಂತಹ ಮೂರ್ತಿಗಳನ್ನು ಮಾತ್ರ ತಯಾರಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಡುವಂತಹ ದೊಡ್ಡ ಗಣೇಶ ಮೂರ್ತಿಗಳನ್ನು ಸದ್ಯಕ್ಕೆ ತಯಾರಿಸುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ.

    ಗಣೇಶ ಮೂರ್ತಿ ತಯಾರಿಕೆಗೆ ಅಗತ್ಯ ಹಾಗೂ ಲಭ್ಯವಿರುವ ಜೇಡಿ ಮಣ್ಣನ್ನು ತರಲು ಮುಂದಾದವರಿಗೆ ವಾಹನ ಸಾಗಾಟದ ಬಾಡಿಗೆಯೂ ಹೆಚ್ಚಳವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಸರ್ಕಾರ ಶ್ರಮಿಕ ವರ್ಗದ ಸಹಾಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಇತ್ತ ಕಾರ್ವಿುಕರೂ ಅಲ್ಲದ, ಅತ್ತ ಕಲಾವಿದರೂ ಎಂದು ಗುರುತಿಸಲಾಗದ ಗಣಪತಿ ಮೂರ್ತಿ ತಯಾರಕರಿಗೂ ವಿಶೇಷ ಪ್ಯಾಕೇಜ್ ಘೊಷಿಸಬೇಕು.
    |ಮುತ್ತಣ್ಣ ಭರಡಿ ಪ್ರಧಾನ ಕಾರ್ಯದರ್ಶಿಜಿಲ್ಲಾ ಗಣಪತಿ ಮೂರ್ತಿ ತಯಾರಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts