More

    ಗಣರಾಜ್ಯೋತ್ಸವದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ

    ತೇರದಾಳ: ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಜ.26ರಂದು ಹಾಜರಿರಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಗಣರಾಜ್ಯೋತ್ಸವದ ನಿಮಿತ್ತ ಪುರಸಭೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು. ಆನಂದ ನಡುವಿನಕೇರಿ, ಶಂಕರ ಕುಂಬಾರ, ಸದಾಶಿವ ಹೊಸಮನಿ, ವಿಶ್ವನಾಥ ಉಪ್ಪಿನ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.

    ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ನಡೆಯವ ಸಾರ್ವಜನಿಕ ಧ್ವಜಾರೋಹಣ ಬೆಳಗ್ಗೆ 8.30ಕ್ಕೆ ನೆರವೇರಿಸುವುದು. ಸರ್ಕಾರಿ ಕಚೇರಿ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವುದು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಬಗ್ಗೆ ನಿರ್ಧರಿಸಲಾಯಿತು.

    ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪಿ.ಎಸ್. ಮಠಪತಿ, ತಾಲೂಕು ವೈದ್ಯಾಧಿಕಾರಿ ಜಿ.ಎಚ್. ಗಲಗಲಿ, ಉಪನೋಂದಣಾಧಿಕಾರಿ ಎಸ್.ಪಿ. ಮುತ್ತಪ್ಪಗೋಳ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಈರಣ್ಣ ದಡ್ಡಿ, ಜಗದೀಶ ಈಟಿ, ಬಿಇಒ ಎ.ಕೆ. ಬಸನ್ನವರ, ಆಹಾರ ನಿರೀಕ್ಷಕ ವಿಠ್ಠಲ ಕೂಗಾಟೆ, ಪಿಎಸ್‌ಐ ಅಪ್ಪು ಐಗಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts