More

    ಗಡಿ ತಂಟೆಯನ್ನು ಸರ್ಕಾರ ನಿರ್ಲಕ್ಷಿಸಬಾರದು

    ಬೆಳಗಾವಿ: ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಅಂತಿಮ ವಿಚಾರಣೆ ನ. 23ರಂದು ನಿಗದಿಯಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷಿಸಬಾರದು ಎಂದು ಕನ್ನಡಪರ ಹೋರಾಟಗಾರರು ಸಲಹೆ ನೀಡಿದ್ದಾರೆ.

    ಬೆಳಗಾವಿ ಸಹಿತ 865 ಹಳ್ಳಿ, ಪಟ್ಟಣ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ. ಗಡಿ ವಿವಾದ ಗಂಭೀರವಾಗಿ ತೆಗೆದುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಸದ್ಯದಲ್ಲಿಯೇ ಅಲ್ಲಿನ ಮುಖ್ಯಮಂತ್ರಿ ನೇತೃತ್ವದಲ್ಲಿ ತಜ್ಞರು ಮತ್ತು ಹೋರಾಟಗಾರರ ಸಭೆ ನಡೆಸಲು ನಿರ್ಧರಿಸಿದೆ.

    ಪೂರಕವಾಗಿ ಅಲ್ಲಿನ ಗಡಿ ಉಸ್ತುವಾರಿ ಸಚಿವ ಜಯಂತ ಪಾಟೀಲ ಈಚೆಗೆ ಬೆಳಗಾವಿಗೂ ಭೇಟಿ ನೀಡಿ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ವಾರದಲ್ಲಿ ಅವರನ್ನೆಲ್ಲ ಮುಂಬಯಿಗೆ ಕರೆಸಿಕೊಳ್ಳುವ ಭರವಸೆ ನೀಡಿ ಹೋಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ನಿಷ್ಕ್ರಿಯಗೊಂಡಿರುವ ಗಡಿ ಸಂರಕ್ಷಣಾ ಆಯೋಗಕ್ಕೆ ಜೀವ ತುಂಬುವ ಕೆಲಸ ಮಾಡಬೇಕು. ಗಡಿ ಕಾನೂನು ತಜ್ಞರ ತಂಡ ರಚಿಸುವಂತೆ ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರದ ಗಡಿ ತಂಟೆಯನ್ನು ಕರ್ನಾಟಕ ಸರ್ಕಾರ ಈಗಲೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗೆ ಮುಂದುವರಿದರೆ ನ್ಯಾಯಾಂಗ ಹೋರಾಟದಲ್ಲೂ ಪೆಟ್ಟು ತಿನ್ನಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

    ನ್ಯಾಯಾಂಗ ನಡೆಯಲ್ಲಿ ತಪ್ಪು ಹೆಜ್ಜೆ ಇಡದಂತೆ ಮಹಾರಾಷ್ಟ್ರದಲ್ಲಿ ಆಡಳಿತಕ್ಕೆ ಬಂದ ಸರ್ಕಾರಗಳು ಕ್ರಮ ವಹಿಸುತ್ತಿವೆ. ಖ್ಯಾತ ಕಾನೂನು ತಜ್ಞ ವೈದ್ಯನಾಥನ್ ಹೆಗಲಿಗೆ ಕಾನೂನು ತಂಡದ ಜವಾಬ್ದಾರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮರ್ಪಕವಾದ ವಾದ ಮಂಡನೆಗೆ ತಜ್ಞರನ್ನು ನೇಮಿಸಿಕೊಂಡು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts