More

    ಗಡಿಭಾಗದಲ್ಲಿ ಶಾಂತಿ ಕದಡಿದರೆ ಹೋರಾಟ

    ನಿಪ್ಪಾಣಿ, ಬೆಳಗಾವಿ: ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ಐಕ್ಯುಎಸ್‌ಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ ಹೇಳಿದರು.
    ಕೆಎಲ್‌ಇ ಸಂಸ್ಥೆಯ ಇಲ್ಲಿನ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಐ.ಕ್ಯೂ.ಎಸ್.ಸಿ ಪ್ರೇರಿತ ರಾಜ್ಯಶಾಸ್ತ್ರ ವಿಭಾಗ, ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಂ.ಹುರಳಿ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಸಂವಿಧಾನ ಪಾವಿತ್ರ್ಯ ಕಾಪಾಡಿಕೊಂಡು ಹೋಗುವ ಜತೆಗೆ ಅದರ ಜ್ಞಾನ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಪೂರ್ವ ಪೀಠಿಕೆಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಭಾರತೀಯ ಸೇನೆಗೆ ಸೇರ್ಪಡೆಗೊಂಡ 14 ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಎಚ್.ಡಿ.ಚಿಕ್ಕಮಠ, ಡಾ. ಎಸ್.ಎಂ.ರಾಯಮಾನೆ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಹಾಗೂ ಎನ್.ಸಿ.ಸಿ. ಅಧಿಕಾರಿ ಸಿದ್ದು ಉದಗಟ್ಟಿ, ಡಾ. ಬಿ.ಎಂ.ಜನಗೌಡ, ಡಾ. ಜಿ.ಎ.ಚೌಗಲಾ, ಎನ್.ಎಸ್.ಬೆಳಗಾಂವಕರ, ಆರ್.ಎಸ್. ಸೂರೆ, ಡಾ. ಆನಂದ ಕೆಂಚಕ್ಕನ್ನವರ, ಎಸ್.ಬಿ.ಪಾಟೀಲ, ಆರ್.ಕೆ.ಮುಲ್ಲಾ, ಎಸ್.ಎಚ್.ಕಾಂಬಳೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧೀರ ಕೋಠಿವಾಲೆ ಇತರರಿದ್ದರು.

    ಅಥಣಿ ಗ್ರಾಮೀಣ ವರದಿ: ಭಾರತೀಯ ಸಂವಿಧಾನ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಜತೆಗೆ ಸಮಾನ ಅವಕಾಶ ನೀಡಿದೆ ಎಂದು ಐಗಳಿ ಪಿಎಸ್‌ಐ ಶಿವಾಜಿ ಪವಾರ ಹೇಳಿದರು.
    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಉಪಪ್ರಾಚಾರ್ಯ ಅನಿಲ ಮೇಲಿನಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

    ಶಿಕ್ಷಕ ಎಸ್.ರಮೇಶ ಪ್ರತಿಜ್ಞಾ ವಿಧಿ ಬೋಧಿಸಿದರು. ಹನಮವ್ವ ಅದೆಪ್ಪನವರ, ಸಂತೋಷ ಕಾಂಬಳೆ, ರೇಣುಕಾ ದಾಶ್ಯಾಳ, ಪ್ರೇಮಾ ನಾಯಿಕ, ಶಿಲ್ಪಾ ನಾಟೇಕಾರ, ಕುಮಾರ ವೀರಗೌಡ, ನಿಕತ ನಾಯಕವಾಡಿ, ಕವಿತಾ ಕಾಂಬಳೆ, ಕುಮಾರ ನಾವಿ, ನಾಗರಾಜ ಅರಳಿಕಟ್ಟಿ, ಕಿರಣ ಭಜಂತ್ರಿ ಇತರರಿದ್ದರು.

    ಅಭಿವೃದ್ಧಿಗೆ ಮೂಲಸೂತ್ರ ಸಂವಿಧಾನ: ಅರಟಾಳ: ಭಾರತದ ಪ್ರಜೆಗಳಾದ ನಾವು ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸೋಣ ಎಂದು ಪಿಡಿಒ ಎ.ಜಿ.ಎಡಕೆ ಹೇಳಿದರು. ಇಲ್ಲಿನ ಗ್ರಾಪಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಂವಿಧಾನ ಎಂಬುದು ರಾಷ್ಟ್ರದ ಮೂಲ ದಾಖಲೆ ಮಾತ್ರವಲ್ಲ. ಅದೊಂದು ರಾಷ್ಟ್ರೀಯ ಅಭಿವೃದ್ಧಿ, ಸಮಗ್ರತೆ ಹಾಗೂ ಸಾಮೂಹಿಕ ಚಿಂತನೆಯ ಮೂಲ ಸೂತ್ರ ಎಂದರು. ಮುಖಂಡರಾದ ಕರೆಪ್ಪ ಹಿರೇಕುರುಬರ, ಮಾಳಪ್ಪ ಕಾಂಬಳೆ, ಗ್ರಾಪಂ ಕಾರ್ಯದರ್ಶಿ ಆನಂದ ಗಿರಿಜಾಗೋಳ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಹನುಮಂತ ಹಟ್ಟಿ, ಯಶೋಧರ ಕಾಂಬಳೆ, ಪಾಂಡುರಂಗ ಪೂಜಾರಿ, ಹನುಮಂತ ಗಿರಗಾಂವಿ, ಈಶ್ವರ ಬಡಿಗೇರ, ಶಾಂತಾ ಕಟ್ಟಿಮನಿ, ಮುತ್ತವ್ವ ಪೂಜಾರಿ, ದ್ರಾಕ್ಷಾಯಣಿ ಕಾಂಬಳೆ, ಕವಿತಾ ಕಾಂಬಳೆ, ಮಹಾದೇವ ಮಾದರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts