More

    ಗಜೇಂದ್ರಗಡ ಬಂದ್​ಗೆ ವ್ಯಾಪಕ ಬೆಂಬಲ

    ಗಜೇಂದ್ರಗಡ: ನಿರಂತರ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಶುಕ್ರವಾರ ರೈತರು ಕರೆ ನೀಡಿದ್ದ ಗಜೇಂದ್ರಗಡ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕಳೆದ ಐದು ದಿನಗಳಿಂದ ಪಟ್ಟಣದ 23ನೇ ವಾರ್ಡ್​ನ ಉಣಚಗೇರಿ ಗ್ರಾಮದ ರೈತರು ಗ್ರಾಮದ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಸಿ ಅಥವಾ ಗ್ರಾಮವನ್ನು ರಾಮಾಪುರ ಪಂಚಾಯಿತಿಗೆ ಸೇರಿಸಿ ಎಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಅಧಿಕಾರಿಗಳು ನಡೆಸಿದ ಸಂಧಾನ ಸಭೆಗಳು ವಿಫಲವಾಗಿದ್ದರಿಂದ ಆಕ್ರೋಶಗೊಂಡ ರೈತರು ಬಂದ್​ಗೆ ಕರೆ ನೀಡಿದ್ದರು. ಹೀಗಾಗಿ, ಬೆಳಗ್ಗೆ ತರಕಾರಿ ಮಾರುಕಟ್ಟೆ ಸೇರಿ ಪಟ್ಟಣದ ಬಹುತೇಕ ಅಂಗಡಿ, ಹೋಟೆಲ್​ಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವ ಮೂಲಕ ಸಾರ್ವಜನಿಕರು ರೈತರು ನೀಡಿದ್ದ ಕರೆಗೆ ಸ್ಪಂದಿಸಿದ್ದರು.
    ಹೆಸ್ಕಾಂ ಕಚೇರಿಯ ಆವರಣದಿಂದ ಮಧ್ಯಾಹ್ನ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕೆಕೆ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಹಿರೇಬಜಾರ, ಕಟ್ಟಿಬಸವೇಶ್ವರ ರಂಗಮಂದಿರ, ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ದುರ್ಗಾ ವೃತ್ತ ಮಾರ್ಗವಾಗಿ ಕೆಕೆ ವೃತ್ತಕ್ಕೆ ಆಗಮಿಸಿತು. ಅಲ್ಲಿ ಮಾನವ ಸರಪಳಿ ನಿರ್ವಿುಸಿ ಪ್ರತಿಭಟನಾ ಸಭೆ ನಡೆಸಲಾಯಿತು. ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಾಲಾ-ಕಾಲೇಜು, ಬ್ಯಾಂಕ್ ಹಾಗೂ ಬಸ್ ಸಂಚಾರ ಎಂದಿನಂತಿತ್ತು.
    ಶಶಿಧರ ಹೂಗಾರ, ಮುತ್ತಣ್ಣ ಮ್ಯಾಗೇರಿ, ಬಿ.ಎಸ್. ಶೀಲವಂತರ, ಮುರ್ತಜಾ ಡಾಲಾಯತ, ಶರಣು ಪೂಜಾರ, ಎಂ.ಎಸ್. ಹಡಪದ, ಶಿವರಾಜ ಘೊರ್ಪಡೆ, ರಾಜು ಸಾಂಗ್ಲೀಕರ, ಬಾಲು ರಾಠೋಡ, ಬಸವರಾಜ ಪಲ್ಲೇದ, ಕೆರಿಯಪ್ಪ ಪಟ್ಟಣಶೆಟ್ಟಿ, ಇಸ್ಮಾಯಿಲ್ ಗೊಲಗೇರಿ, ಕಳಕಪ್ಪ ಪೋತಾ, ಉಮೇಶ ರಾಠೋಡ, ಅಪ್ಪು ಮತ್ತಿಕಟ್ಟಿ, ಶಿವಕುಮಾರ ಚವ್ಹಾಣ, ವಿನಾಯಕ ಜರಾತರಿ, ವಿ.ಬಿ. ಸೋಮನಕಟ್ಟಿಮಠ, ಸಂಜಯ ದೊಡ್ಡಮನಿ, ರಜಾಕ ಡಾಲಾಯತ, ಶರಣು ದೊಡ್ಡಮನಿ, ಪರಶುರಾಮ ಕಲಾಲ, ಬಸವರಾಜ ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ, ಖಾಜಾ ಕಟ್ಟಿಮನಿ, ಉಣಚಗೇರಿ ಗ್ರಾಮದ ರೈತರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts