More

    ಗಂಜಿಗೆರೆಯಲ್ಲಿ ಗೋವಿಂದನ ಸೇವೆ ಜಾತ್ರೆ

    ಆಲೂರು: ಗಂಜಿಗೆರೆ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವರಿಗೆ ಗೋವಿಂದನ ಸೇವೆ ಜಾತ್ರೆ ಸಂಭ್ರಮದಿಂದ ಜರುಗಿತು.


    ಕೋವಿಡ್ ಕಾರಣದಿಂದ 3 ವರ್ಷಗಳಿಂದ ಜಾತ್ರೆ ರದ್ದುಪಡಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ನಡೆಸುವ ಉದ್ದೇಶದಿಂದ ದೇವಾಲಯವನ್ನು ವಿವಿಧ ಹೂಗಳಿಂದ ಸಿಂಗಾರ ಮಾಡಿ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಮಾವು, ಬಾಳೆಯಿಂದ ತಳಿರು ತೋರಣಗಳನ್ನು ಕಟ್ಟಿದ್ದರಿಂದ ಕಂಗೊಳಿಸುತ್ತಿತ್ತು.


    ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಆರಂಭಿಸಲಾಯಿತು. ಹೋಮ, ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮಗಳಾದ ಸಿದ್ದಾಪುರ, ಅಪ್ಪಗೋಡನಹಳ್ಳಿ, ತಿಪ್ಪನಹಳ್ಳಿ, ಬಸವನಹಳ್ಳಿ, ತಟ್ಟೆಕೆರೆ, ನೆಲ್ಲಿಗೆರೆ, ಗರಿಘಟ್ಟ, ಸಂಸೋಗೆ, ಕಾಳಶೆಟ್ಟಿಬೀಡು, ಮುದ್ದನಹಳ್ಳಿ, ಕ್ಯಾತನಹಳ್ಳಿ, ಕ್ಯಾತನಹಳ್ಳಿ ಕಾಲನಿ, ಅರಳಿಮರದಕೊಪ್ಪಲು, ಮಳೇನಹಳ್ಳಿ, ಲಕ್ಕೋಡನಹಳ್ಳಿ, ರಾಮನಹಳ್ಳಿ, ಮಂದಿರ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts