More

    ಖಾಸಗಿ ಶಾಲೆ ಶಿಕ್ಷಕರ ಸಂಕಷ್ಟಕ್ಕೆ ಮಿಡಿದ ಹೃದಯ, ಹಣಕಾಸಿನ ನೆರವು ನೀಡಲು ಮುಂದಾದ ನಾಯಕ, ಜೆಡಿಎಸ್ ಮುಖಂಡನಿಂದ ಗುರುನಮನ

    ಇಂಡಿ: ಕರೊನಾದಿಂದ ಸಂಕಷ್ಟಕ್ಕೀಡಾಗಿರುವ ಖಾಸಗಿ ಶಾಲೆ ಶಿಕ್ಷಕರಿಗೆ ಧನಸಹಾಯ ನೀಡುವ ಮೂಲಕ ಇಲ್ಲೋರ್ವ ಯುವ ನಾಯಕ ಗುರುನಮನ ಸಲ್ಲಿಸಲು ಮುಂದಾಗಿದ್ದಾರೆ.
    ಇಂಡಿ ತಾಲೂಕಿನ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಖಾಸಗಿ ಶಾಲೆ ಶಿಕ್ಷಕರ ಸಮಸ್ಯೆ ನೋಡಲಾಗದೆ ಅಗತ್ಯ ನೆರವು ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಶಿಕ್ಷಕರ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಭಾನುವಾರ ಸುದ್ದಿಗೋಷ್ಠಿ ಮೂಲಕ ಸಂಪರ್ಕ ವಿವರ ನೀಡಿದ್ದಾರೆ.
    ಹಿರೇಬೇವನೂರ ಜಿಪಂ ಕ್ಷೇತ್ರದಲ್ಲಿರುವ ಖಾಸಗಿ ಶಾಲೆ ಶಿಕ್ಷಕರಿಗೆ ಕೈಲಾದ ಸಹಾಯ ಮಾಡಲು ಮುಂದೆ ಬಂದಿರುವ ಇವರು ಬೇರೆ ತಾಲೂಕು, ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಮ್ಮ ಕ್ಷೇತ್ರದ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿಸಿದ್ದಾಗಿ ತಿಳಿಸಿದ್ದಾರೆ.
    ಶಿಕ್ಷಕರ ಗೋಳು ಹೇಳತೀರದರು:
    ಪ್ರಸ್ತುತ ಖಾಸಗಿ ಶಿಕ್ಷಕರ ಗೋಳು ನೋಡಲಾಗುತ್ತಿಲ್ಲ. ಪಾಠ ಮಾಡಿಕೊಂಡಿದ್ದ ಅನೇಕ ಶಿಕ್ಷಕರು ಲಾಕ್‌ಡೌನ್‌ನಿಂದಾಗಿ ಬೀದಿಗೆ ಬಿದ್ದಿದ್ದಾರೆ. ತರಕಾರಿ ಮಾರಿಕೊಂಡು, ಕೂಲಿ ಮಾಡಿಕೊಂಡು, ಮನೆ ಮನೆಗೆ ಹಾಲು, ಪತ್ರಿಕೆ ಹಂಚು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಶಿಕ್ಷಣ ಸಚಿವರ ಹತ್ತಿರ ಹೋಗಿ ಪರಿಹಾರ ನೀಡಿ ಎಂದು ಮನವಿ ಮಾಡಿಕೊಂಡಾಗ, ಶಿಕ್ಷಣ ಸಚಿವರು ಮನವಿಗೆ ಸ್ಪಂದಿಸದೆ ಪರಿಹಾರ ನೀಡಲು ಆಗಲ್ಲ ಬೇಕಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಎಂದು ಕಾಮಗೊಂಡ ಪ್ರಶ್ನಿಸುತ್ತಾರೆ.
    ಅಲ್ಲದೇ, ಈಚೆಗೆ ಕ್ಷೇತ್ರದವೊಬ್ಬ ಶಿಕ್ಷಕ ಮನೆಗೆ ಆಹಾರ ಸಾಮಗ್ರಿ ತರಲೆಂದು ಸಾವಿರ ರೂ.ಸಾಲ ಕೇಳಿದಾಗ ಮನಸ್ಸಿಗೆ ತುಂಬ ಬೇಸರ ಎನ್ನಿಸಿತು. ಹೀಗಾಗಿ ತಕ್ಕಮಟ್ಟಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದು ಅಂಥ ಶಿಕ್ಷಕರು ಚಿದುಗೌಡ ಬಿರಾದಾರ (ಮೊ. 7259796924), ಮಲ್ಲು ಅತನೂರ (ಮೊ.7259931803), ಮಂಜು ಕಾಮಗೊಂಡ (ಮೊ.9482281111)ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
    ಮಂಜುನಾಥ ಕಾಮಗೊಂಡ ಅವರ ಈ ಕಾರ್ಯಕ್ಕೆ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಸಾಥ್ ನೀಡಿದ್ದು, ಹಿರೇಬೇವನೂರ ಜಿಪಂ ಕ್ಷೇತ್ರದ ಹಳ್ಳಿಗಳಾದ ಹಿರೇಬೇವನೂರ, ಹಿರೇಬೇವನೂರ ತಾಂಡಾ, ಸಾತಲಗಾಂವ, ಲಾಳಸಂಗಿ, ರೋಡಗಿ, ಶಿವಪೂರ, ನಾದ ಬಿಕೆ, ನಾದ ಕೆಡಿ, ಗೋಳಸಾರ, ಮಿರಗಿ, ಅರ್ಜುಣಗಿ ಕೆ.ಡಿ, ಅರ್ಜುಣಗಿ ಬಿ.ಕೆ, ಮಾರ್ಸನಳ್ಳಿ, ಹಂಚನಾಳ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹೆಸರು ನೋಂದಾಯಿಸಬಹುದೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts