More

    ಖಾನಾಪುರ ತಾಲೂಕಿನಲ್ಲಿ ತಗ್ಗಿದ ವರುಣನ ಅಬ್ಬರ

    ಖಾನಾಪುರ: ಕಳೆದ ಮೂರು ದಿನಗಳಿಂದ ಆರ್ಭಟಿಸಿದ್ದ ವರುಣನ ಅಬ್ಬರ ಭಾನುವಾರ ತಗ್ಗಿದೆ. ಆದರೆ, ಪ್ರವಾಹ ಕಡಿಮೆಯಾಗಿಲ್ಲ. ಪಾಂಡರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲೂಕಿನ ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್ ಹಾಗೂ ರೈಲು ಹಳಿಗಳು ಕೆಲಕಾಲ ಜಲಾವೃತಗೊಂಡವು. ಪರಿಸ್ಥಿತಿ ಗಂಭೀರತೆ ಅರಿತ ರೈಲ್ವೆ ಇಲಾಖೆ ಅಧಿಕಾರಿಗಳು, ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್ ಮೂಲಕ ಎಲ್ಲ ರೈಲು ಸಂಚರಿಸಲು ವ್ಯವಸ್ಥೆ ಮಾಡಿದರು. ಹೀಗಾಗಿ ಯಾವುದೇ ಸಮಸ್ಯೆಯಾಗಲಿಲ್ಲ.

    ಕಣಕುಂಬಿ, ಭೀಮಗಡ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ರಭಸದ ಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅರಣ್ಯದಂಚಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪಟ್ಟಣದ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿರುವ ವಸತಿ ಗೃಹಗಳಿಗೆ ಕುಂಬಾರ ಹಳ್ಳದ ನೀರು ನುಗ್ಗಿತ್ತು.

    ವರುಣನ ಅಬ್ಬರ ಇಳಿದ ನಂತರ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಖಾನಾಪುರ- ಡುಕ್ಕರವಾಡಿ, ಮಳವ- ನೀಲಾವಡೆ, ಹಬ್ಬನಹಟ್ಟಿ- ತೋರಾಳಿ ಮತ್ತು ಚಿಕ್ಕಹಟ್ಟಿಹೊಳಿ- ಚಿಕ್ಕಮುನವಳ್ಳಿ ಮಾರ್ಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts