More

    ಖಾನಾಪುರ ಕ್ಷೇತ್ರದಲ್ಲಿ ಮೂಲಸೌಲಭ್ಯಕ್ಕೆ ಒತ್ತು

    ಖಾನಾಪುರ, ಬೆಳಗಾವಿ: ಮತಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕೆಂಬ ದೃಷ್ಟಿಕೋನದಿಂದ ಹಲಸಿ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.

    ತಾಲೂಕಿನ ಹಲಸಿ ಗ್ರಾಮದಲ್ಲಿ ಹೆಸ್ಕಾಂನ 33 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ ಸರ್ಕಾರದ ಮೇಲೆ ಒತ್ತಡ ತಂದ ಮೇಲೆ ಹಲಸಿ, ಬೈಲೂರು, ಕೊಡಚವಾಡ ವಿದ್ಯುತ್ ಉಪಕೇಂದ್ರಗಳಿಗೆ ಅನುಮೋದನೆ ದೊರೆತಿದೆ. ಹಲಸಿ ಕೇಂದ್ರ ಸ್ಥಾಪನೆಯಿಂದಾಗಿ ಈ ಭಾಗದ ಜನರಿಗೆ ವಿದ್ಯುತ್, ರೈತರ ಪಂಪ್‌ಸೆಟ್‌ಗೆ ವಿದ್ಯುತ್ ದೊರೆಯಲಿದೆ ಎಂದರು. ಶೀಘ್ರದಲ್ಲೇ ಬೈಲೂರು ಹಾಗೂ ಕೊಡಚವಾಡ ವಿದ್ಯುತ್ ಕೇಂದ್ರ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ಈ ಕಾಮಗಾರಿಗಳು ಪೂರ್ಣಗೊಂಡಾಗ ತಾಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

    ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ ಕಲ್ಪನಾ ತಿರವೀರ, ಹಲಸಿ ಗ್ರಾಪಂ ಅಧ್ಯಕ್ಷ ಮುನೀರ್ ಸಂಗೊಳ್ಳಿ, ಗ್ರಾಪಂ ಉಪಾಧ್ಯಕ್ಷ ಸಂತೋಷ ಹಂಜಿ, ಘೋಟಗಾಳಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಪಾಟೀಲ, ಭುರುಣಕಿಯ ಗ್ರಾಪಂ ಅಧ್ಯಕ್ಷ ಮುಬಾರಕ ಕಿತ್ತೂರ, ಕಾಪೋಲಿ ಗ್ರಾಪಂ ಅಧ್ಯಕ್ಷ ಸಂದೀಪ ದೇಸಾಯಿ, ಮಹಾದೇವ ಕೋಳಿ, ಮಧು ಕವಳೇಕರ, ಅನಿತಾ ದಂಡಗಲ್, ಸದಸ್ಯರಾದ ಸಾಗರ ಪಾಟೀಲ, ೋಟಗಾಳಿ ಗ್ರಾಪಂ ಉಪಾಧ್ಯಕ್ಷ ಅಮರ ಕುಭಾಣ, ಪಾಂಡು ಪಾಟೀಲ, ಅರುಣ ಬೆಳಗಾಂವಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts