More

    ಖರ್ಗೆಗೆ ಬೆದರಿಕೆ ಕರೆ ಕಾಂಗ್ರೆಸ್ ತಲ್ಲಣ

    ವಾದಿರಾಜ್ ವ್ಯಾಸಮುದ್ರ ಕಲಬುರಗಿ
    ರಾಜ್ಯಸಭೆಗೆ ಚುನಾವಣೆ ನಡೆಯುವ ಸಮಯದಲ್ಲಿಯೇ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪರಿಚಿತ ಕರೆ ಬಂದಿರುವುದು ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಮೂಡಿಸಿದರೆ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
    ಯಾರಿಗೂ ಕೇಡು ಬಯಸದ ಈ ಹಿರಿಯ ನಾಯಕನಿಗೆ ಬೆದರಿಕೆ ಹಾಕಿದವರು ಯಾರು? ಎಲ್ಲಿಂದ ಬೆದರಿಕೆ ಹಾಕಿದರು? ಏತಕ್ಕಾಗಿ ಬೆದರಿಕೆ ಹಾಕಿದರು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಆರೋಪಿಗಳನ್ನು ಬಂಧಿಸಿ ಎಲ್ಲ ವಿಷಯಗಳನ್ನು ಕಕ್ಕಿಸಬೇಕಾದ ಜವಾಬ್ದಾರಿ ಪೊಲೀಸ್ರ ಮೇಲಿದೆ.
    ರಾಷ್ಟ್ರದ ಹಿರಿಯ ರಾಜಕಾರಣಿ ಖರ್ಗೆಯವರನ್ನು ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ತಂದೆ ಮಲ್ಲಿಕಾರ್ಜುನ ಖರ್ಗೆ , ಮಗ ಪ್ರಿಯಾಂಕ್ ಖರ್ಗೆ ಇವರಿಬ್ಬರಿಗೂ ಖರ್ಗೆಯವರ ಬೆಂಗಳೂರಿನ ಮನೆಯಲ್ಲಿರುವ ಸ್ಥಿರ ದೂರವಾಣಿಗೆ 7ರಂದು ಕರೆ ಮಾಡಿರುವ ದುಷ್ಕರ್ಮಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
    ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತನಾಡಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ಖರ್ಗೆಯವರನ್ನು ನಿಂದಿಸಿದ್ದಾರೆ. ರಾಜ್ಯಸಭೆಗೆ ಸ್ಪರ್ಧಿಸಿದ್ದನ್ನು ಪ್ರಶ್ನಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ರಾತ್ರಿ ಒಂದು ಗಂಟೆಗೂ ಇದೇ ರೀತಿಯ ಕರೆ ಖರ್ಗೆ ಪುತ್ರ ಪ್ರಿಯಾಂಕ್ ಅವರಿಗೆ ಬರುತ್ತದೆ.
    ಎರಡು ಬಾರಿ ಬೆದರಿಕೆ ಕರೆ ಬಂದಿರುವುದರಿಂದ ತಕ್ಷಣವೇ ಕಾರ್ಯರೂಪಕ್ಕೆ ಇಳಿದ ಪ್ರಿಯಾಂಕ್, ಡಿಜಿ ಪ್ರವೀಣ ಸೂದ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. 50 ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳಾಗಿ ಜನಸೇವೆ ಮಾಡುತ್ತಿರುವ ಖರ್ಗೆ ಸ್ನೇಹಪರ ವ್ಯಕ್ತಿ. ನೋಡಲು ಗಂಭೀರವಾಗಿ ಕಂಡರೂ ಮನಸ್ಸು ಮೃದು. ಇವರು ಎಲ್ಲರ ಎಲ್ಲ ಪಕ್ಷಗಳ ನಾಯಕರ ಗೌರವಕ್ಕೆ ಪಾತ್ರರೂ ಹೌದು. ಇದೇ ಕಾರಣಕ್ಕೆ ಅವರು ಒಂಬತ್ತು ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ದಾಖಲೆ ಹೊಂದಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದ್ವೇಷದ ರಾಜಕಾರಣ, ಜಾತಿ ರಾಜಕಾರಣ ಮಾಡಿದವರಲ್ಲ. ಚರಿತ್ರೆ ಸ್ವಚ್ಛವಾಗಿದೆ. ಇಂಥ ಹಿರಿಯ ನಾಯಕನನ್ನು ಬೆದರಿಸಿದವರಾರು ಎನ್ನುವುದೇ ಯಕ್ಷಪ್ರಶ್ನೆ.
    ಬಡವರ, ದೀನ ದಲಿತರ, ಶೋಷಿತರ, ಹೀಗೆ ನಿಮ್ನ ವರ್ಗಗಳ ಪರ ಧ್ವನಿ ಎತ್ತುತ್ತಿದ್ದ ಹಿರಿಯ ನಾಯಕರೂ ಆಗಿದ್ದಾರೆ. ಕೇವಲ ಮಂತ್ರಿಯಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿಯೂ ಮಹತ್ವದ ಹುದ್ದೆ ಹೊಂದಿದವರಾಗಿದ್ದಾರೆ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಇವರಿಗೆ ಅಗ್ರಪಂಕ್ತಿ. ಈ ನಾಯಕನಿಗೆ ಬೆದರಿಕೆ ಕರೆ ಬಂದಿರುವುದನ್ನು ಹಗುರವಾಗಿ ಪರಿಗಣಿಸಬಾರದು. ಪೊಲೀಸ್ ಇಲಾಖೆ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಿದೆ. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದೆ. ಖರ್ಗೆ ಯವರ ಜೀವನದಲ್ಲಿಯೇ ಇದು ಮೊದಲ ಬೆದರಿಕೆ ಕರೆಯಾಗಿದೆ.

    ನಮ್ಮ ತಂದೆ ಮಲ್ಲಿಕಾಜರ್ುನ ಖರ್ಗೆಯವರಿಗೆ ಹಗಲು ಮತ್ತು ನನಗೆ ರಾತ್ರಿ ಸ್ಥಿರ ದೂರವಾಣಿ ಮೂಲಕ ಬೆದರಿಕೆ ಕರೆ ಬಂದಿದ್ದು ನಿಜ. ಈ ನಿಟ್ಟಿನಲ್ಲಿ ನಾವು ಡಿಜಿ ಪ್ರವೀಣ ಸೂದ್ ಅವರಿಗೆ ಭೇಟಿ ಮಾಡಿ ದೂರು ಸಲ್ಲಿಸಿದ್ದೇವೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದೇವೆ.
    -ಪ್ರಿಯಾಂಕ್
    ಖರ್ಗೆ, ಮಾಜಿ ಸಚಿವ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts