More

    ಕ್ಷಯ ಮುಕ್ತ ಜಿಲ್ಲೆಗೆ ಅಗತ್ಯವಿದೆ ಸಾರ್ವಜನಿಕರ ಸಹಕಾರ


    ಚಿತ್ರದುರ್ಗ:ನಿಗದಿತ ಅವಧಿಯ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂ ತ್ರಣಾಧಿಕಾರಿ ಡಾ.ಸುಧಾ ಹೇಳಿದರು. ಜಿಲ್ಲಾಡಳಿತ,ಜಿಪಂ,ಆರೋಗ್ಯ ಇಲಾಖೆ ಹಾಗೂ ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್‌ನಿಂದ ಬುದ್ಧ ನಗ ರದ ನಗರದ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳ ಪೌಷ್ಠಿಕಾಂಶ ಬಲವರ್ಧನೆಗಾಗಿ ದ ತ್ತು ಕಾರ‌್ಯಕ್ರಮದಲ್ಲಿ ಅವರು ಮಾತನಾಡಿ,ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪತ್ತೆ ಚಿಕಿತ್ಸೆ ಹಾಗೂ ಕ್ಷಯರೋಗಕ್ಕೆ ನಿತ್ಯ ತೆ ಗೆದುಕೊಳ್ಳುವ ಔಷಧಗಳನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ.
    ನೋಂದಣಿಯಿಂದ 6 ತಿಂಗಳವರೆಗೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮನೆ,ಮನೆ ಭೇಟಿಯ ಮೂಲಕ ಸಕ್ರಿಯ ಕ್ಷಯ ರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಮನೆ ಬಾಗಿಲಿಗೆ ಬರುವಂಥ ಆಶಾ,ಆರೊಗ್ಯಕಾರ‌್ಯಕರ್ತೆಯರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು,ಇದರಿಂದಾಗಿ ಚಿತ್ರದುರ್ಗವನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ ವಾಗಲಿದೆ. ಎಲ್ಲೆಂದರಲ್ಲಿ ಉಗುಳದೆ ಶುಚಿತ್ವದ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯವಿದೆ. ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಹಾಗೂ ಸಂ ಸ್ಕೃತಿ ಉಳಿವಿಗೆ ಶ್ರಮಿಸಬೇಕಿದೆ ಎಂದರು.
    ಸ್ವಾಸ್ಥ್ಯಸರ್ಕಲ್ ಫೌಂಡೇಶನ್ ಅಧ್ಯಕ್ಷೆ ಡಾ.ತೋಜಾಕ್ಷಿಬಾಯಿ ಮಾತನಾಡಿ,ಬದ್ಧ್ದತೆಯಿಂದ ಚಿಕಿತ್ಸೆ ಪಡೆದರೆ ಕ್ಷಯರೋಗ ಸಂಪೂರ್ಣ ವಾಸಿಯಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕಿದೆ. ಈ ರೋಗ ಪ್ರಮುಖವಾಗಿ ಶ್ವಾಸಕೋಶಕ್ಕೆ ತಗುಲುತ್ತದೆ. ಜನ ದಟ್ಟಣೆ ಇರುವಂತಹ ಸ್ಥಳಗಳಲ್ಲಿ ರೋಗಕ್ಕೆ ತುತ್ತಾಗುವ ಅಪಾಯವಿದೆ. ವ್ಯಾಯಮ,ಪ್ರಾಣಾಯಾಮಗಳಿಂದ ರೋಗ ಮುಕ್ತರಾಗ ಬಹು ದು. ಒಳ್ಳೆಯ ಗಾಳಿಗಾಗಿ ಸಸಿಗಳನ್ನು ನೆಟ್ಟು ಬೆಳೆಸಬೇಕಿದೆ.
    ಧೂಮಪಾನ,ಮದ್ಯಪಾನದಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಕುಸಿದು ರೋಗಗಳು ಉಲ್ಬಣಗೊಳ್ಳುತ್ತವೆ. ಮನೆಗಳ ಸುತ್ತ -ಮುತ್ತ ಸ್ವಚ್ಛ ಪರಿಸರದ ಅಗತ್ಯವಿದೆ. ದತ್ತು ಪಡೆದ ರೋಗಿಗಳಿಗೆ 6 ತಿಂಗಳವರೆಗೂ ಪ್ರತಿ ತಿಂಗಳು 10ನೇ ತಾರೀಖಿನಂದು ಆಹಾರದ ಕಿಟ್ ವಿತರಿ ಸಲಾಗುವುದು ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ,ರೋಗಿಗಳನ್ನು ದತ್ತು ಪಡೆಯಲು ದಾನಿಗಳು ಮುಂದೆ ಬರಬೇಕು. ಕ್ಷಯರೋಗ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವದ ಅವಶ್ಯಕತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಕ್ಷಯ ಮಿ ತ್ರ ಯೋಜನೆಯಡಿ ಹೆಸರು ನೋಂದಾಯಿಸುವಂತೆ ದಾನಿಗಳಿಗೆ ಮನವಿ ಮಾಡಿದ್ದಾರೆ. ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ಈ ನಿ ಟ್ಟಿನಲ್ಲಿ ಆಸಕ್ತಿ ತೋರಿಸಬೇಕಿದೆ ಎಂದರು. ಸ್ವಾಸ್ಥ್ಯಸರ್ಕಲ್ ಫೌಂಡೆಶನ್ ಸಂಸ್ಥೆ ದತ್ತು ಪಡೆದ 10 ಕ್ಷಯರೋಗಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ,ಬುದ್ದನಗರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುಮೂರ್ತಿ,ಶ್ರೀಧರ,ಗಂಗಾಧರ್,ರಂಗಾರೆಡ್ಡಿ, ಸ್ವಾಸ್ಥ್ಯಸರ್ಕಲ್ ಫೌಂಡೇಶನ್‌ನ ಮೂರ್ತಪ್ಪ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts