More

    ಕ್ವಾರಂಟೈನ್​ಗೆ ಇನ್ಪೋಸಿಸ್ ಧರ್ಮಶಾಲೆ ರೆಡಿ

    ಹುಬ್ಬಳ್ಳಿ: ಕರೊನಾ ಸೇನಾನಿಗಳು ಕ್ವಾರಂಟೈನ್​ಗೆ ಒಳಗಾದರೆ ಇಲ್ಲಿನ ಕಿಮ್್ಸ ಆವರಣದಲ್ಲಿರುವ ಇನ್ಪೋಸಿಸ್ ಧರ್ಮಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಿರ್ವಹಣೆ, ಕರ್ತವ್ಯಕ್ಕೆ ಹಾಜರಾಗಲು ಅನುಕೂಲವಾಗುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.

    ಬಡ ರೋಗಿಗಳ ಸಂಬಂಧಿಕರು ಕಿಮ್್ಸ ಆಸ್ಪತ್ರೆಗೆ ಬಂದರೆ ರೊಕ್ಕ ಕೊಟ್ಟು ಉಳಿದುಕೊಳ್ಳಲು ಇಂಥ ದೊಡ್ಡ ಪಟ್ಟಣದಲ್ಲಿ ಸಾಧ್ಯವಾಗುವುದಿಲ್ಲ. ಹಾಗಾಗಿಯೆ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ದೊಡ್ಡದಾದ ಧರ್ಮಶಾಲೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ರೋಗಿಗಳ ಸಂಬಂಧಿಕರು ದಿನಕ್ಕೆ 20 ರೂ. ಕೊಟ್ಟು ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ವಿಶೇಷ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದವರು ಪ್ರತಿ ದಿನಕ್ಕೆ 100 ರೂ. ಕೊಡುತ್ತಾರೆ. ಈಗ ಇದು ಕರೊನಾ ಸೋಂಕಿತರ ಬಳಿ ತೆರಳಿ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕರು ಹಾಗೂ ಡಿ ಗ್ರುಪ್ ಸಿಬ್ಬಂದಿ ಕ್ವಾರಂಟೈನ್​ಗೆ ಒಳಗಾದರೆ ಇಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

    ಒಟ್ಟು 20 ವಿಶೇಷ ಹಾಗೂ 12 ಸಾಮಾನ್ಯ ಕೊಠಡಿಗಳಿವೆ. 70ಕ್ಕೂ ಹೆಚ್ಚು ಜನರು ಇಲ್ಲಿ ವಾಸ ಮಾಡಬಹುದು. ಶೌಚಗೃಹ, ಸ್ನಾನಗೃಹಗಳು ಇವೆ. ಸುತ್ತಲೂ ಗಿಡ ಮರಗಳು ಇರುವುದರಿಂದ ವಾತಾವರಣ ತಂಪೆನಿಸುತ್ತದೆ. ಜನರ ಸಂಪರ್ಕವೂ ಇಲ್ಲ. ಕ್ವಾರಂಟೈನ್​ನಲ್ಲಿರುವ ತಮ್ಮ ಸಿಬ್ಬಂದಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು ಉಸ್ತುವಾರಿಯನ್ನೂ ನೇಮಕ ಮಾಡಲಾಗಿದೆ. ಈಗಾಗಲೇ ನಾಲ್ವರು ಶುಶ್ರೂಷಾಧಿಕಾರಿಗಳನ್ನು ಇಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿಯೂ ಹತ್ತಿರ ಇರುವುದರಿಂದ ಏನಾದರೂ ಆದರೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.

    ನಿತ್ಯ 500 ಊಟ ವಿತರಣೆ

    ಈಗಾಗಲೇ ಅಂಬಾಜಿ ಟ್ರಸ್ಟ್ ಹಾಗೂ ಇಸ್ಕಾನ್ ವತಿಯಿಂದ ನಿತ್ಯ ತಲಾ 250 ಊಟ ವಿತರಿಸಲಾಗುತ್ತಿದೆ. ಕಿಮ್್ಸ ಸಿಬ್ಬಂದಿ, ಹೊರ ರೋಗಿಗಳು ಹಾಗೂ ಅವರ ಸಂಬಂಧಿಕರು ಈ ಊಟ ಸವಿಯುತ್ತಿದ್ದಾರೆ. ಕ್ವಾರಂಟೈನ್​ನಲ್ಲಿದ್ದವರಿಗೂ ಈ ಊಟ ಒದಗಿಸುವ ಚಿಂತನೆ ನಡೆದಿದೆ.

    ನಮ್ಮ ಕಿಮ್್ಸ ಸಿಬ್ಬಂದಿಗೆ ಕ್ವಾರಂಟೈನ್ ಮಾಡಿದರೆ ಧರ್ಮಶಾಲಾದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಅವರು ಹೊರಗಡೆ ಕ್ವಾರಂಟೈನ್ ಆಗಲು ಬಯಸುವುದಕ್ಕಿಂತ ಇಲ್ಲಿಯೇ ಉಳಿದುಕೊಂಡರೆ ಉತ್ತಮ ಎಂದು ಈ ತೀರ್ವನಕ್ಕೆ ಬರಲಾಗಿದೆ.
    | ಡಾ. ಮಧುಚಂದ್ರ ಆರ್., ಇನ್ಪೋಸಿಸ್ ಧರ್ಮಶಾಲಾ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts