More

    ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಿ

    ಬೈಲಹೊಂಗಲ, ಬೆಳಗಾವಿ: ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿ ಆಯೋಜಿಸಿದ್ದು, ಇತಿಹಾಸ ಸೃಷ್ಟಿಸಿದೆ. ಪಟ್ಟಣದ ಯುವಕರು ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

    ಪಟ್ಟಣದಲ್ಲಿ ಟೆನ್ನಿಸ್ ಅಸೋಸಿಯೇಷನ್, ವಿಜಯ ಸೋಷಿಯಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಮುಕ್ತ ಹೊನಲು-ಬೆಳಕಿನ ಟೆನ್ನಿಸ್ ಪಂದ್ಯಾವಳಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಕ್ರೀಡಾ ಸ್ಪೂರ್ತಿ ಮೆರೆದು ದೈಹಿಕ ಸಂಪತ್ತು ಹೊಂದಬೇಕು ಎಂದರು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 350 ಟೆನ್ನಿಸ್ ಆಟಗಾರರು ನೋಂದಣಿ ಮಾಡಿಕೊಂಡಿದ್ದು ಇತಿಹಾಸವಾಗಿದೆ. ಸೋಲು, ಗೆಲುವು ಲೆಕ್ಕಿಸದೆ ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದರು.

    ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಎಸ್.ಸಿ.ಮೆಟಗುಡ್ಡ ಮೈದಾನದಲ್ಲಿ ಬ್ಯಾಟ್ ಬೀಸುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ,
    ಮಾತನಾಡಿ, ಸಂಘಟಕರು ಅಚ್ಚುಕಟ್ಟಾಗಿ ಪಂದ್ಯಾವಳಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಕೆಎಲ್‌ಇ ನಿರ್ದೇಶಕ ಡಾ.ವಿ.ಎಸ್. ಸಾಧುನವರ, ನ್ಯಾಯವಾದಿಗಳಾದ ಆಶೋಕ ಮೂಗಿ, ಸಿದ್ರಾಮ ಮಠದ, ಡಾ.ಬಿ.ಎಸ್. ಮಹಾಂತಶೆಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಬಾಬು ಡಮ್ಮಣಗಿ, ಬಾಬು ಹರಕುಣಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.

    ಪಂದ್ಯಾವಳಿ ವೀಕ್ಷಿಸಲು ಟೆನ್ನಿಸ್ ಪ್ರೇಮಿಗಳು ಕಿಕ್ಕಿರಿದು ತುಂಬಿದ್ದು, 45 ವಯೋಮಿತಿ ಆಟಗಾರರ ಸಿಂಗಲ್ಸ್ ಪಂದ್ಯಗಳು ನಡೆದವು. ಶನಿವಾರ ಡಬಲ್ಸ್ ಟೆನ್ನಿಸ್ ಟೂರ್ನಿಗಳು ಆರಂಭಗೊಳ್ಳಲಿವೆ ಎಂದು ಸಂಘಟಕರು ತಿಳಿಸಿದ್ದಾರೆ. ಡಾ.ಮಹಾಂತೇಶ ಗದಗ, ಹರ್ಷ ಢಮ್ಮಣಗಿ, ಕೆಎಲ್ಇ ಉಪಾಧ್ಯಕ್ಷ ಬಸಣ್ಣ ತಟವಾಟಿ, ಡಾ.ಇಜಾಜ್ ಬಾಗೇವಾಡಿ, ಡಾ.ತೌಸೀಫ್ ಸಂಗೊಳ್ಳಿ, ಗಿರೀಶ ಕುಡಸೋಮಣ್ಣವರ, ಸುನೀಲ ತುಳಜನ್ನವರ, ರವಿ ತುರಮರಿ, ವಿನಯ ಬೋಳನ್ನವರ, ಮಹೇಶ ತಿಗಡಿ, ಬಾಬು ಹರಕುಣಿ, ಶಿವಯೋಗಿ ಹರಕುಣಿ, ಗಂಗಾಧರ ರಾಮಣ್ಣವರ, ವಿನಯ ಪರೀಟ, ಶಂಭು ಹೂಲಿ, ಆನಂದ ಹಿರೇಮಠ, ಪ್ರಥಮ ತುರಮರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts