More

    ಕ್ರೀಡಾವಸತಿ ನಿಲಯದಲ್ಲಿಲ್ಲ ಸೌಕರ್ಯ

    ಯಾದಗಿರಿ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದ ಹಿಂಭಾಗದಲ್ಲಿನ ಕ್ರೀಡಾ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮೂಲತಃ ಟೇಬಲ್ ಟೆನ್ನಿಸ್ ಕೋರ್ಟ್ಕ ಟ್ಟಡದಲ್ಲಿ ಕ್ರೀಡಾ ವಸತಿ ನಿಲಯ ನಡೆಸಲಾಗುತ್ತಿದ್ದು, ಇಲ್ಲಿನ ಮಕ್ಕಳಿಗೆ ಕನಿಷ್ಠ ಮೂಲಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಟ್ಟು 123 ಮಕ್ಕಳ ಸಂಖ್ಯೆ ಇದೆ. ಆದರೆ, ಶೌಚಗೃಹ, ಸ್ನಾನಗೃಹಗಳಿಲ್ಲ. ಸಣ್ಣ ಕೋಣೆಯಲ್ಲಿ 10 ಬೆಡ್ಗಳನ್ನು ಹಾಕಲಾಗಿದ್ದು, ಇಲ್ಲೇ ಮಕ್ಕಳು ವಸ ಮಾಡುವಂತಾಗಿದೆ ಎಂದು ಕೋಸುಂಬೆ ಅಸಮಾಧಾನ ವ್ಯಕ್ತಪಡಿಸಿದರು.

    ಕ್ರೀಡಾ ವಸತಿ ನಿಲಯದ ರಕ್ಷಣೆಗೆ ಗಾರ್ಡ್ ಗಳು ಇಲ್ಲದೆ ಬಾಲಕೀಯರು ರಾತ್ರಿ ಸಮಯದಲ್ಲಿ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ, ಮೆನು ಚಾರ್ಟ್ ಪ್ರಕಾರ ಆಹಾರ ನೀಡುತ್ತಿಲ್ಲ. ಸರಕಾರ ಇಷ್ಟೆಲ್ಲ ಹಣ ವ್ಯಯಿಸಿ ಮಕ್ಕಳ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ, ಯಾದಗಿರಿ ಈ ವಸತಿ ನಿಲಯದ ಸ್ಥಿತಿ ಅಧೋಗತಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ಕೋಸುಂಬೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts