More

    ಕ್ರೀಡಾಕೂಟಗಳಿಂದ ಗೆಲ್ಲುವ ಹುಮ್ಮಸ್ಸು ಹೆಚ್ಚಳ; ಪರಿಶ್ರಮಪಟ್ಟವರಿಗೆ ಜಯ: ಕೃಷ್ಣಪ್ಪ

    ಶಿಕಾರಿಪುರ: ಸೋಲು-ಗೆಲುವಿಗಿಂತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗಳು ನಮ್ಮಲ್ಲಿ ಸದಾ ಚೈತನ್ಯ ತುಂಬುತ್ತವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಹೇಳಿದರು.
    ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಜುಬೇದಾ ವಿದ್ಯಾಸಂಸ್ಥೆ ಆತಿಥ್ಯದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಹೆಚ್ಚೆಚ್ಚು ಕ್ರೀಡೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲಿ ಯಾರೂ ಮೇಲಲ್ಲ-ಕೀಳಲ್ಲ. ಅವರವರ ಪರಿಶ್ರಮದ ಮೇಲೆ ಗೆಲುವು ದೊರೆಯುತ್ತದೆ. ಕ್ರೀಡಾಕೂಟಗಳು ನಮ್ಮಲ್ಲಿ ಗೆಲ್ಲುವ ಹುಮ್ಮಸ್ಸು ತುಂಬುತ್ತವೆ ಎಂದರು.
    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಹಫೀಜ್ ಕರ್ನಾಟಕಿ ಮಾತನಾಡಿ, ಬಸವಾದಿ ಶರಣರು ಹೇಳಿದಂತೆ ಇವ ನಮ್ಮವ, ಇವ ನಮ್ಮವ ಎಂದರೆ ನಮಗರಿವಿಲ್ಲದಂತೆ ನಮ್ಮಲ್ಲಿ ಸೌಹಾರ್ದ ಭಾವ ಮೂಡುತ್ತದೆ. ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಸಹಬಾಳ್ವೆ ಚಿಗುರೊಡೆಯುತ್ತದೆ. ಕ್ರೀಡೆಗಳು ನಮಗೆ ಸಹನೆ ಮತ್ತು ಪರಿಶ್ರಮದ ಪಾಠ ಹೇಳುತ್ತವೆ ಎಂದು ಹೇಳಿದರು.
    ತಾಲೂಕಿನ 21 ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts