More

    ಕ್ರಿಮ್ಸ್​ನಲ್ಲಿ ಕರೊನಾ ವಿಶೇಷ ಘಟಕ

    ಕಾರವಾರ: ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಏಪ್ರಿಲ್ 3 ರೊಳಗೆ ಕರೊನಾವಿಶೇಷ ಘಟಕ ಸಿದ್ಧ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಕೇಂದ್ರೀಕೃತ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ 150 ಹಾಸಿಗೆಗಳ ಐಸೋಲೇಶನ್ ಸುಪ್ರವೈಸ್ಡ್ ಸೆಂಟರ್(ಐಎಸ್​ಸಿ), ಶಂಕಿತರನ್ನು ಇರಿಸಲು 50 ಹಾಸಿಗೆಗಳ ಐಎಸ್​ಸಿ ಹಾಗೂ ಹೆಚ್ಚುವರಿಯಾಗಿ ಕ್ರಿಮ್ಸ್​ನ 25 ಹಾಸಿಗೆಗಳನ್ನು ಇದಕ್ಕೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ, 10 ಹಾಸಿಗೆಗಳ ವ್ಯವಸ್ಥೆ ಇರುವ ಐಸಿಯು ಘಟಕ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ನೌಕಾ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ 100 ಹಾಸಿಗೆ ವ್ಯವಸ್ಥೆ ಇದೆ. ಜಿಲ್ಲಾಡಳಿತದಿಂದ ಅಲ್ಲಿಗೆ ಕಾಯಂ ವೈದ್ಯರನ್ನು ನಿಯೋಜಿಸಲಾಗಿದೆ. ಜಿಪಂ ಸಿಇಒ ಎಂ.ರೋಶನ್ ಈ ಎಲ್ಲ ತಯಾರಿ, ಜವಾಬ್ದಾರಿ ನಡೆಸುತ್ತಿದ್ದಾರೆ ಎಂದು ಡಿಸಿ ವಿವರಿಸಿದ್ದಾರೆ.
    ಅಂಗನವಾಡಿಗಳ ಮೂಲಕ ಆಹಾರ: ಜಿಲ್ಲೆಯಲ್ಲಿ ತುರ್ತು ಆಹಾರದ ಅಗತ್ಯವಿದ್ದವರಿಗೆ ಜಿಲ್ಲಾಡಳಿತದಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ.
    ತುರ್ತು ಆಹಾರದ ಅಗತ್ಯವಿದ್ದಂತಹ ಸಾರ್ವಜನಿಕರು ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಿರ್ದೇಶಕರಾದ ಡಾ. ರಾಜೇಂದ್ರ ಬೇಕಲ್ (ಮೊಬೈಲ್ ಸಂಖ್ಯೆ: 9880301250) ಅವರನ್ನು ಸಂರ್ಪಸುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಬೇಕಾಗಿರುತ್ತದೆ. ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಸಮೀಪದ ಅಂಗನವಾಡಿಗಳ ಮೂಲಕ ಆಹಾರ ಒದಗಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ವಿನಂತಿಸಿದ್ದಾರೆ
    ಮನೆ ರಹಿತರಿಗೆ ಸೌಲಭ್ಯ: ಕರೊನಾ ದಿಗ್ಬಂಧನದಿಂದ ತೊಂದರೆಗೆ ಒಳಗಾದವರಿಗೆ, ನಿರ್ಗತಿಕರಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್​ಗಳಲ್ಲಿ ವಸತಿ, ಊಟದ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ(ಮೊ:9483886886), ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಬಡಿಗೇರ(ಮೊ:9448508383) ಅವರನ್ನು ಸಂರ್ಪಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಮನೆ, ಮನೆ ಪರಿಶೀಲನೆ:
    ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಕಾರ್ಯಕರ್ತರಿಂದ ಗ್ರಾಮೀಣ ಭಾಗದಲ್ಲಿ ಮನೆ, ಮನೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು 3 ದಿನ ಈ ಸಮೀಕ್ಷೆ ನಡೆಯಲಿದ್ದು, ಎಲ್ಲ ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿ ಜ್ವರ ಇದೆಯೇ ಎಂಬುದನ್ನು ಖಚಿತ ಮಾಡುವರು. ಹೊರ ಊರಿನಿಂದ ಬಂದವರ ಮಾಹಿತಿ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts