More

    ಕೌಡಗಾಂವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

    ಔರಾದ್: ಕೌಡಗಾಂವ ಗ್ರಾಮದ ಹತ್ತಿರ ಇರುವ ಕೆರೆಯಲ್ಲಿ ಗುರುವಾರ ಮೊಸಳೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

    ಕೆರೆಯ ಸುತ್ತ ನೂರಾರು ಎಕರೆ ಅರಣ್ಯ ಪ್ರದೇಶವಿದೆ. ಮುಸ್ತಾಪುರ, ಬಾಬಳಿ, ಬಲ್ಲೂರ ಗ್ರಾಮಗಳ ಜನರು ಇದೇ ಅರಣ್ಯ ಪ್ರದೇಶಕ್ಕೆ ದನ ಮೇಯಿಸಲು ಬರುತ್ತಾರೆ. ಅವುಗಳಿಗೆ ನೀರು ಕುಡಿಸಲು ಕೌಡಗಾಂವ ಕೆರೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ನೂರಾರು ಕುರಿಗಳು, ದನಗಳು ಇದೇ ಕೆರೆಯ ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತವೆ. ಈಗ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ದನಗಾಹಿಗಳು ಮತ್ತು ಮೀನುಗಾರರಿಗೆ ಆತಂಕ ಸೃಷ್ಟಿಯಾಗಿದೆ.

    ವಿಷಯ ತಿಳಿದು ಕೌಡಗಾಂವ ಕೆರೆಗೆ ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡ ಮೊಸಳೆ ಇರುವುದನ್ನು ಖಚಿತಪಡಿಸಿಕೊಂಡಿದೆ. ಗ್ರಾಮದಲ್ಲಿ ಡಂಗೂರ ಸಾರಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಕೆರೆಯ ದಡದಲ್ಲಿ ನೀರಿನಲ್ಲಿ ಮೊಸಳೆ ಇದೆ ಎಚ್ಚರಿಕೆ ಎಂಬ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.

    ಸಂತಪುರ ಉಪವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ವಿಜಯವಾಣಿಯೊಂದಿಗೆ ಮಾತನಾಡಿ, ಗ್ರಾಮದ ಸುತ್ತ ನಾರಂಜಾ ಸೇತುವೆ ಇರುವುದರಿಂದ ಈ ಮೊಸಳೆ ದನಗಳ ವಾಸನೆಗೆ ಆಹಾರ ಹುಡುಕುತ್ತ ಬಂದು ಕೌಡಗಾಂವ ಕೆರೆಯಲ್ಲಿ ಬೀಡುಬಿಟ್ಟಿರಬಹುದು. ಅಂದಾಜು ಐದಾರು ವರ್ಷ ವಯಸ್ಸಿನ ಈ ಮೊಸಳೆ ಸುಮಾರು 50 ಕೆಜಿ ತೂಕವಿರಬಹುದು. ಕೆರೆಯಲ್ಲಿ ನೀರು ಹೆಚ್ಚಿಗೆ ಇರುವುದರಿಂದ ಇದನ್ನು ಹಿಡಿಯಲು ಕಷ್ಟವಾಗುತ್ತಿದೆ. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts