More

    ಕೋಟೆ ಆಂಜನೇಯ ಸ್ವಾಮಿ ಜಾತ್ರೆಗೆ ಸಂಭ್ರಮದ ತೆರೆ

    ಯಾದಗಿರಿ: ಅತ್ಯಂತ ಜಾಗೃತ ದೇವರೆಂದೇ ಪ್ರಸಿದ್ಧಿ ಹೊಂದಿರುವ ಶಹಾಪುರ ತಾಲೂಕಿನ ವನದುರ್ಗ ಗ್ರಾಮದಲ್ಲಿನ ಕೋಟೆ ಶ್ರೀಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ಸತತ ಮೂರು ದಿನಗಳ ಕಾಲ ನಡೆದು ಭಾನುವಾರ ಸಂಭ್ರಮದಿಂದ ತೆರೆ ಕಂಡಿತು.
    ಉತ್ಸವದ ಹಿನ್ನೆಲೆಯಲ್ಲಿ ಇಡೀ ಊರಿನಲ್ಲಿ ಹಬ್ಬದ ವಾತಾವರಣ. ಪ್ರತಿ ಮನೆಯಲ್ಲೂ ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ಡಿ.16 ರಂದು ಕಳಶ ಪೂಜೆ ಮತ್ತು ದೀಪೋತ್ಸವ ಕಟ್ಟುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಸಂಜೆ ಗಂಗಾ ಸ್ನಾನಕ್ಕೆ ದೇವರ ಉತ್ಸವ ಮೂತರ್ಿ ಪಲ್ಲಕ್ಕಿಯಲ್ಲಿ 30 ಕಿ.ಮಿ ಪಾದಯಾತ್ರೆಯ ಮೂಲಕ ಸುರಪೂರ ತಾಲೂಕಿನ ಶಳ್ಳಿಗಿ ಗ್ರಾಮದ ಕೃಷ್ಣಾ ನದಿಗೆ ಪ್ರವೇಶಿಸಿತು.
    17ರ ಬೆಳಗ್ಗೆ ಸುರುಪುರ ಸಂಸ್ಥಾನದ ಒಳಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂತರ್ಿ ಪ್ರವೇಶಿಸಿದ ಕಾರಣ, ಅರಸು ಮನೆತನದಿಂದ ವಿಶೇಷವಾದ ಪೂಜೆ ನಡೆಯಿತು. ಅಲ್ಲಿಂದ ಸಿದ್ದಾಪುರ ಗ್ರಾಮದಲ್ಲಿ ಮೆರವಣಿಗೆ ನಡೆದು ವನದುರ್ಗ ಗ್ರಾಮದ ಸೀಮೆಯನ್ನು ಪ್ರವೇಶಿಸಿತು.
    ಭಾನುವಾರ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಅಗ್ನಿ ಪ್ರವೇಶಿಸಲಾಯಿತು. ಈ ವೇಳೆ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯವಾದ ದೇವರ ಹೇಳಿಕೆ ನೀಡಿದ ದೇವಸ್ಥಾನದ ಅರ್ಚಕ ರಾಮಾಚಾರ್ಯ ಜೋಶಿ, ಮುಂಬರುವ ವರ್ಷದಲ್ಲಿ ಸಕಾಲಕ್ಕೆ ಮುಂಗಾರು ಸೇರಿದಂತೆ ಎಲ್ಲ ಮಳೆ ಸಮೃದ್ಧವಾಗಿ ಬರುತ್ತದೆ. ರೈತನಿಗೆ ಈ ವರ್ಷ ಸುಖ, ಸಮೃದ್ಧಿ, ಮತ್ತು ಉತ್ತಮ ಬೆಳೆ ಪ್ರಾಪ್ತಿಯಾಗಲಿದೆ. ಭಕ್ತರ ಕಷ್ಟ, ಸುಖಕ್ಕೆ ವೀರಾಂಜನೇಯ ಸ್ವಾಮಿ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂದು ಹೇಳಿದರು.
    ಸುರಪುರ ಸಂಸ್ಥಾನದ ಕೃಷ್ಣಪ್ಪ ನಾಯಕ, ಗ್ರಾಮದ ಪ್ರಮುಖರಾದ ತಿಪ್ಪರಾಜ್ ಹವಾಲ್ದಾರ್, ಶಿವಲಿಂಗ ವೆಂಕಟಗಿರಿ, ಕಾಶಿಪತಿ ದೂದೆಕೊಂಡ, ವೆಂಕಟೇಶ ಜೋಶಿ, ಕೀತರ್ಿ ಆರ್.ಜೋಶಿ, ಮಲ್ಲಪ್ಪ ನಾಯಕ, ನಾಗರಾಜ ದೊರೆ, ರಾಮಚಂದ್ರಪ್ಪ, ಡಾ.ಶಿವಶರಣಪ್ಪ ಇದ್ದರು.
    ಸೋಮವಾರ ಕೋಟೆ ಆವರಣದಲ್ಲಿ ಯುವಕರಿಗಾಗಿ ಕುಸ್ತಿ ಪಂದ್ಯಾವಳಿ, ಜೋಳದ ಚೀಲ ಎತ್ತುವ ಸ್ಪಧರ್ೆ, ಕಲ್ಲಿನ ಗುಂಡು ಎತ್ತುವ ಸ್ಪಧರ್ೆ, ಮೊದಲಾದ ಗ್ರಾಮೀಣ ಕ್ರೀಡಾಕೂಟುಗಳನ್ನು ಆಯೋಜಿಸಿ ವಿಜೇತರಿಗೆ ಬೆಳ್ಳಿಯ ಕಡಗ ಇನ್ನಿತರ ಪಾರಿತೋಷಕ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts