More

    ಕೋವಿಡ್ ಕೊಂಚ ಇಳಿಕೆ



    ಧಾರವಾಡ: ಜಿಲ್ಲೆಯಲ್ಲಿ ಕೆಲದಿನಗಳಿಂದ 250ಕ್ಕೂ ಮೇಲ್ಪಟ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಲೇ ಇವೆ. ಶನಿವಾರ ಕೊಂಚ ಇಳಿಕೆಯಾಗಿದ್ದು, 227 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪೀಡಿತರ ಸಂಖ್ಯೆ 12,684ಕ್ಕೆ ಏರಿದೆ. ಇದುವರೆಗೆ 9693 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2627 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 364 ಜನ ಮೃತಪಟ್ಟಿದ್ದಾರೆ.

    ಶನಿವಾರದ ಪ್ರಯೋಗಾಲಯ ವರದಿ ಪ್ರಕಾರ ಧಾರವಾಡ ನಗರ ಹಾಗೂ ಗ್ರಾಮೀಣ ತಾಲೂಕಿನಲ್ಲಿ 55 ಪ್ರದೇಶದಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕು ಸೇರಿ 51 ಕಡೆಗಳಲ್ಲಿ ಸೋಂಕು ಪತ್ತೆಯಾಗಿದೆ.

    ಕಲಘಟಗಿ ತಾಲೂಕಿನ ಅಸ್ತಕಟ್ಟಿ ತಾಂಡಾ, ಮಿಶ್ರಿಕೋಟಿ, ದುಮ್ಮವಾಡದ ನೀರಸಾಗರ, ಬಗಡಗೇರಿ, ಕಾಡನಕೊಪ್ಪ; ನವಲಗುಂದ ತಾಲೂಕಿನ ಅಳಗವಾಡಿ, ಜೋಶಿ ಪ್ಲಾಟ್, ನವಲಗುಂದ ಓಣಿ, ಬಸವೆಶ್ವರನಗರ, ಮೊರಬ ಗ್ರಾಮದ ಪ್ಯಾಟಿ ಓಣಿ, ತಲೆಮೊರಬ; ಕುಂದಗೋಳ ತಾಲೂಕಿನ ಕೊಂಕಣ ಕುರಹಟ್ಟಿ, ಶರೇವಾಡ, ಯಲಿವಾಳ, ತರ್ಲಘಟ್ಟ, ರಟಗೇರಿ, ಅಲ್ಲಾಪುರ, ಕುಂದಗೋಳ ಕಟಗರ ಓಣಿ; ಅಣ್ಣಿಗೇರಿ ತಾಲೂಕಿನ ಭದ್ರಾಪುರ,ಅಂಬಿಗೇರಿ ಕ್ರಾಸ್​ನಲ್ಲಿ ಸೋಂಕಿತರು ಕಂಡುಬಂದಿದ್ದಾರೆ.

    ಅನ್ಯ ಜಿಲ್ಲೆ, ತಾಲೂಕಿನಿಂದಲೂ ಕರೊನಾ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts