More

    ಕೋಟೆ ಕೆರೆ ಪ್ರದೇಶದಲ್ಲಿ ಪೊಲೀಸರ ಗಸ್ತು

    ಚಿಕ್ಕಮಗಳೂರು: ಕೆರೆಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕೆರೆಗಳ ಸುತ್ತ ಮುತ್ತ ಕಸಹಾಕದಂತೆ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಗಸ್ತಿನ ಮೂಲಕ ನಾಗರಿಕರಲ್ಲಿ ಸ್ವಚ್ಛತೆ ಅರಿವು ಮೂಡಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

    ನಗರಸಭೆ ಅಧ್ಯಕ್ಷರು ಹಾಗೂ ಸ್ವಚ್ಛಟ್ರಸ್ಟ್ ಪದಾಧಿಕಾರಿಗಳೊಂದಿಗೆ ಮಂಗಳವಾರ ಕೋಟೆ ಕೆರೆ ಪ್ರದೇಶ ಪರಿಶೀಲಿಸಿ ಮಾತನಾಡಿದ ಅವರು, ಕೋಟೆಕೆರೆ ಸುತ್ತಮುತ್ತ ಕಸಹಾಕಿ ಮಲಿನಗೊಳಿಸುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷರು, ಸ್ವಚ್ಛ ಟ್ರಸ್ಟ್ ಪದಾಧಿಕಾರಿಗಳು ಮಾಹಿತಿ ನೀಡಿದ್ದು, ಕೆರೆ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಸ್ವಚ್ಛತೆ ಬಗ್ಗೆ ನಾಗರಿಕರಿಗೆ ಮೊದಲು ಪ್ರಜ್ಞೆ ಮೂಡಬೇಕು ಎಂದರು.

    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರದ ಕೋಟೆ ಕೆರೆ ಸುತ್ತ ಸ್ವಚ್ಛತೆ ಕಾಪಾಡುವ ಜತೆ ಕಾಯಕಲ್ಪ ನೀಡಲು ಚಿಂತನೆ ನಡೆಸಲಾಗಿದೆ. ಕೆರೆ ಪ್ರವೇಶ ದ್ವಾರದಲ್ಲಿ ಯುವಕರ ಗುಂಪೊಂದು ಮದ್ಯಪಾನ, ಧೂಮಪಾನ ಮಾಡುತ್ತಾರೆ ಎಂಬ ದೂರಿದೆ. ಮುಂದೆ ಇಂಥಚಟುವಟಿಕೆಗಳು ಕಂಡುಬಂದರೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ ಎಂದರು.

    ನಗರದ ಸ್ವಚ್ಛತೆ ಕಾಪಾಡುವುದು ನಾಗರಿಕರ ಜವಾಬ್ದಾರಿ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಮಾಡುವುದು ಅಪರಾಧ. ಕಸಹಾಕುವುದು, ಅಕ್ರಮ ಚಟುವಟಿಕೆ ನಡೆಸುವುದು ಕಂಡು ಬಂದರೆ ಸಿಸಿ ಕ್ಯಾಮರಾ ಅಳವಡಿಸಿ ನಗರಸಭೆಯಿಂದ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts