More

    ಕೊಳ್ಳೇಗಾಲದಲ್ಲಿ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ : ಅಭಿವೃದ್ಧಿಯಲ್ಲಿ ಪಕ್ಷ ಮುಖ್ಯವಲ್ಲ : ಸಚಿವ ವಿ.ಸೋಮಣ್ಣ ಅಭಿಮತ

    ಚಾಮರಾಜನಗರ : ಅಭಿವೃದ್ಧಿಯಲ್ಲಿ ಪಕ್ಷ ಮುಖ್ಯವಲ್ಲ. ಬಸ್ ನಿಲ್ದಾಣ ವಿಚಾರವಾಗಿ ಶಾಸಕ ಎನ್.ಮಹೇಶ್ ಕಾರ್ಯ ವೈಖರಿಯನ್ನು ಪ್ರಶಂಸಿಸಬೇಕು. ಜನರ ಹಿತ ದೃಷ್ಟಿಯಿಂದ ಬಸ್ ಟರ್ಮಿನಲ್ ವಿಚಾರವಾಗಿ ಆಸಕ್ತಿ ವಹಿಸಿ ಲೋಕಾರ್ಪಣೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

    ಕೊಳ್ಳೇಗಾಲ ನಗರದ ಬಹು ನಿರೀಕ್ಷಿತ ಹೈಟೆಕ್ ಬಸ್ ನಿಲ್ದಾಣವನ್ನು ಸೋಮವಾರ ಉದ್ಘಾಟಿಸಿ ಬಳಿಕ ಆಯೋಜಿಸಿದ್ದ ವೇದಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.
    ಬಸ್ ನಿಲ್ದಾಣ ಉದ್ಘಾಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ನಗರಸಭಾ ಕೆಲ ಸದಸ್ಯರು ಪ್ರತಿಭಟಿಸಿದ್ದಾರೆ. ಅವರಿಗೂ ಮುಜುಗರ ಆಗದಂತೆ ಉದ್ಘಾಟನೆಗೂ ಮುನ್ನ ಅವರ ಜತೆ ಮಾತನಾಡಿದ್ದೇನೆ. ಒಳ್ಳೇ ಕೆಲಸವಾಗಬೇಕಾದರೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿಯಬೇಕಿದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಮುಖ್ಯವಲ್ಲ. ಜನರಿಗಾಗಿ ಈ ಬಸ್ ನಿಲ್ದಾಣ ಉದ್ಘಾಟಿಸಲಾಗಿದೆ. ಸುಮ್ಮನೆ ಕುಳಿತವರು ಎಂದು ಎಡವುದಿಲ್ಲ. ಶಾಸಕ ಎನ್.ಮಹೇಶ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕೆಲಸ ಆಗಬೇಕಿದೆ. ಮುಂದೆ ಎಲ್ಲವೂ ಆಗುತ್ತದೆ ಎಂದರು.
    ನಗರದಲ್ಲಿ ಜನಸಂಖ್ಯೆ ದ್ವಿಗುಣವಾಗುತ್ತಿದೆ. ಜನರಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಲೇಬೇಕು. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ, ಗುಡಿ ಕೈಗಾರಿಕೆ ಹೆಚ್ಚಿಸಬೇಕಿದೆ. ಸಣ್ಣ ರೈತರ ಉದ್ಧಾರ ಅಗಬೇಕಿದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಲಿದೆ. ಇಂತಹ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದೆ. ಅವೆಲ್ಲವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುತ್ತದೆ ಎಂದರು.
    ಹಿಂದೆ ಖಾಸಗಿ ಬಸ್‌ಗಳು ಈ ನಿಲ್ದಾಣದಲ್ಲೆ ನಿಲ್ಲುತ್ತಿತ್ತು. ಅಂತೆಯೇ, ಮುಂದೆಯು ಅದಕ್ಕೆ ಅವಕಾಶ ಸಿಗುತ್ತದೆ. ಖಾಸಗಿ ಬಸ್ ಏಜೆಂಟ್‌ಗಳು ಧೃತಿಗೆಡಬೇಡಿ. ಐಡಿಎಸ್‌ಎಂಟಿ ಮಳಿಗೆಗಳ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ನಗರಸಭೆ ಆಯುಕ್ತರು ಅವರೆಲ್ಲರ ಜತೆ 2 ದಿನದಲ್ಲಿ ಸಭೆ ನಡೆಸಬೇಕು. ಅವರಿಗೆ ಬೇರೆಡೆ ಅವಕಾಶ ನೀಡಬೇಕು ಎಂದರು.
    ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಕೊಳ್ಳೇಗಾಲದ ಸವಾರ್ಂಗೀಣ ಅಭಿವೃದ್ಧಿ ಬಿಜೆಪಿ ಸರ್ಕಾರದ ಮೂಲ ಉದ್ದೇಶವಾಗಿದೆ. 2018ರಲ್ಲಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ಆಗಿತ್ತು. ಅವಾಗ ಯಾರಿದ್ದರು ಅನ್ನೊದು ಬೇಡ, ಇದೀಗ ಬಸ್ ನಿಲ್ದಾಣ ಕಾಮಗಾರಿ ಶೇ.90 ರಷ್ಟು ಮುಗಿದಿದೆ. ಜಿಲ್ಲೆಯ ನಾಲ್ಕು ತಾಲೂಕಿನ ಬಸ್ ನಿಲ್ದಾಣಕ್ಕಿಂತಲೂ ವಿಶೇಷವಾಗಿದೆ ಎಂದರು.
    ಶಾಸಕ ಎನ್.ಮಹೇಶ್ ಮಾತನಾಡಿ, ಬಸ್ ನಿಲ್ದಾಣ ಯಾರ ಕ್ರೆಡಿಟ್ ಅಲ್ಲ. ನಗರಸಭೆ ಹಣ ಎಂದರೆ ಸಾರ್ವಜನಿಕರ ಹಣ, ಇದೀಗ ಜನರ ಹಿತದೃಷ್ಟಿಗಾಗಿ ಬಸ್ ನಿಲ್ದಾಣ ಉದ್ಘಾಟನೆ ಆಗಿದೆ. ಐಡಿಎಸ್‌ಎಂಟಿ ಮಳಿಗೆ ತೆರವು ಮಾಡಲಾಗುತ್ತದೆ. ಅಲ್ಲಿ ಖಾಸಗಿ ಬಸ್‌ಗಳಿಗೂ ಪ್ರತ್ಯೇಕ ನಿಲುಗಡೆ ವ್ಯವಸ್ಥೆಯಾಗಲಿದೆ. ಅಲ್ಲಿವರೆಗೂ ಖಾಸಗಿ ಬಸ್‌ನವರು ಬಸ್ ನಿಲ್ದಾಣದೊಳಗೆ ಬಂದು ಜನರ ಕರೆದೊಯ್ಯಬಹುದು ಎಂದರು.
    ಶಾಸಕರು ಬಸ್ ನಿಲ್ದಾಣ ಲೋಕಾರ್ಪಣೆ ವಿಚಾರವಾಗಿ ತೀರ್ಮಾನ ಮಾಡಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಅದು ತಪ್ಪು. ಸರ್ಕಾರ ಮಾಡಿರುವುದು. ಇದ್ದರಿಂದ ಕೆಲವು ನಗರಸಭೆ ಸದಸ್ಯರಿಗೆ ಬೇಸರವಾಗಿದೆ. ಮುಂದೆ ಅವರೇ ಅರ್ಥ ಮಾಡಿಕೊಳ್ಳುತ್ತಾರೆ. ಆ ವ್ನಿೇಶ್ವರ ಅವರ ತಲೆಯಲ್ಲಿರುವ ವಿಘ್ನ ನಿವಾರಿಸಲಿ. ಲಿಫ್ಟ್ ಕೆಲಸ ಬಾಕಿ ಉಳಿದಿದೆ. ಇನ್ನೆಲ್ಲಾ ಕೆಲಸ ವೈಜ್ಞಾನಿಕವಾಗಿದೆ. ಬಾಕಿ ಉಳಿದ ಶೇ.10 ರಷ್ಟು ಕೆಲಸವೂ ಮುಂದೆ ಆಗುತ್ತದೆ ಎಂದರು.
    ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಿಜಗುಣರಾಜು, ನಗರಸಭಾ ಸದಸ್ಯರಾದ ಕವಿತಾ, ನಾಗಸುಂದ್ರಮ್ಮ, ನಾಸೀರ್ ಶರೀಫ್, ರಾಮಕೃಷ್ಣ, ಸತೀಶ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂವಿತಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಮಂಜುಳಾ, ನಗರಸಭಾ ಆಯುಕ್ತ ರಾಜಣ್ಣ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts