More

    ಕೊಲೆಗೈದು ತಲೆಮರೆಸಿಕೊಂಡಿದ್ದ ಸಾಗರ ಮುಂಡೇವಾಡಿ ಅರೆಸ್ಟ್

    ಗದಗ: ಕಳೆದ ಗುರುವಾರ ರಾತ್ರಿ ನಗರದ ಜೆಟಿ ಮಠ ರಸ್ತೆಯಲ್ಲಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸಾಗರ ಮುಂಡೆವಾಡಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜವುಳಗಲ್ಲಿ ನಿವಾಸಿ ಸಂದೀಪ ಮುಂಡೆವಾಡಿ ಎಂಬ ಯುವಕನನ್ನು ಚಾಕುವಿಂದ ಚುಚ್ಚಿ ಕೊಲೆ ಮಾಡಿರುವುದನ್ನು ಸಾಗರ ಮುಂಡೆವಾಡಿ ಒಪ್ಪಿಕೊಂಡಿದ್ದಾನೆ. ಕಳೆದ ಕೆಲ ವರ್ಷಗಳಿಂದ ಸಾಗರ-ಸಂದೀಪ ನಡá-ವೆ ವೈಯಕ್ತಿಕ ಜಗಳ, ಕೌಟುಂಬಿಕ ಕಲಹಗಳಿದ್ದವು. ಇದೇ ವಿಷಯವೇ ಕೊಲೆಗೆ ಕಾರಣ ಇರಬಹುದು ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ನಿಖರವಾದ ಕಾರಣ ತಿಳಿದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

    ನಗರದ ಜೆಟಿ ಮಠ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಚಹಾ ಕುಡಿಯá-ವಾಗ ಸಂದೀಪ ಮುಂಡೆವಾಡಿ ಮತ್ತು ಸಾಗರ ಮುಂಡೆವಾಡಿ ಮಧ್ಯೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇಬ್ಬರು ಸಹ ಅಟೋ ಚಾಲಕರಾಗಿದ್ದರು ಎಂದರು.

    ಪ್ರಕರಣ ಭೇದಿಸಲು ಡಿಎಸ್ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ ಗದಗ ಶಹರ ಠಾಣೆ ಸಿಪಿಐ ಜಯಂತ ಗೌಳಿ, ಪಿಎಸ್​ಐಗಳಾದ ಆರ್.ಆರ್. ಮುಂಡೆವಾಡಗಿ, ಜಿ.ಟಿ. ಜಕ್ಕಲಿ, ಪ್ರಕಾಶ ಬಣಕಾರ, ಪ್ರೊಬೇಷನರಿ ಪಿಎಸ್​ಐ ಯೂಸೂಫ್ ಜಮೂಲಾ, ಸಿಬ್ಬಂದಿ ವೈ.ಬಿ.ಪಾಟೀಲ, ಬಿ.ಬಿ. ಚಿಕ್ಕಣ್ಣವರ, ವಿ.ಎಂ. ಬಡಿಗೇರ, ಎಸ್.ಎಸ್. ಮಾವಿನಕಾಯಿ, ಯು.ಎನ್. ಸುಣಗಾರ, ಕೆ.ಡಿ. ಜಮಾದಾರ, ಎಚ್.ಐ. ಯಡಿಯಾಪೂರ, ಪಿ.ಎಸ್. ಕಲ್ಲೂರ, ಪಾಂಡು ಭರಮಗೌಡ್ರ, ಅಣ್ಣಪ್ಪ ಕವಲೂರ, ಉಮೇಶ ಹೊಸಳ್ಳಿ, ಆರ್.ಎನ್.ಬಾಲರಡ್ಡಿ ಅವರನ್ನೊಂಡ ವಿಶೇಷ ತಂಡ ರಚಿಸಲಾಗಿತ್ತು ಎಂದು ಎಸ್ಪಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts