More

    ಕೊಲೆ,ಆರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ

    ಚಿತ್ರದುರ್ಗ: ಮಿಸ್‌ಕಾಲ್ ಮೂಲಕ ಪರಿಚಯವಾಗಿದ್ದ ನಗರದ ಗೃಹಿಣಿಯೊಬ್ಬರ ಪತಿಯನ್ನು ಹತ್ಯೆಗೈದಿದ್ದ ಆರು ಜನ ಅಪರಾಧಿಗಳಿಗೆ ಅಪರ ಜಿ ಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
    ಚಳ್ಳಕೆರೆ ತಾಲೂಕು ಮೂಲದ ಹಾಗೂ ಬೆಂಗಳೂರಲ್ಲಿ ಡ್ರೈವರ್ ಆಗಿದ್ದ ಅಕ್ಷಯ್ ಎಂಬಾತ,ಮೊಬೈಲ್‌ನಲ್ಲಿ ಆಕಸ್ಮಿಕವಾಗಿ ಮಹಿಳೆ ಮಾ ತನಾಡಿದ್ದನ್ನೇ ನೆಪ ವಾಗಿಸಿಕೊಂಡು ಪದೆ ಪದೇ ಆಕೆಗೆ ಪೋನ್ ಹಾಗೂ ಮೇಸೆಜ್ ಮಾಡುತ್ತಾ ಆಕೆ ಮತ್ತು ಆಕೆಯ ಗಂಡ ನವೀನ್‌ನನ್ನು ಪರಚಿಯಿಸಿಕೊಂಡಿದ್ದ. ನಂತರದಲ್ಲಿ ಕ್ರಮೇಣ ತನ್ನೊಂದಿಗೆ ಬಂದು ಬಾಳುವಂತೆ ಆ ಗೃಹಿಣಿಯನ್ನು ಪೀಡಿಸತೊಡಗಿದ್ದ.
    ಹೇಗಾದರೂ ಸರಿ,ಆಕೆಯನ್ನು ತನ್ಮೊಂದಿಗೆ ಕರೆದೊಯ್ಯಬೇಕೆಂಬ ದುರುದ್ದೇಶದಿಂದ ಸಹಚರರಾದ ಬೆಂಗಳೂರಿನ ಸಂತೋಷ್, ಎಂ. ಎಸ್.ಕಿರಣ್, ಮಧು, ವಿ.ಕೃಷ್ಣ ಹಾಗೂ ಮುಬಾರಕ್ ಎಂಬುವರೊಂದಿಗೆ ಸೇರಿ ಸಂಚು ರೂಪಿಸಿದ್ದ. ಈ ಎಲ್ಲರೂ ಸೇರಿ ನಗರದ ಹಳೆಯ ಬೆಂಗಳೂರು ರಸ್ತೆಯಲ್ಲಿ 2019 ಮಾರ್ಚ್ 21ರಂದು ನವೀನ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿ,ಮಾರಾಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿ ದ್ದರು.
    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬಡಾವಣೆ ಠಾಣೆ ಸಿಪಿಐ ಪ್ರಕಾಶಗೌಡ ಪಾಟೀಲ್, ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ಅವರು, ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತ ಲಾ ಒಂದು ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts