More

    ಕೊನೆಗೂ ಸೆರೆಸಿಕ್ಕ ಚಿರತೆ

    ಗಜೇಂದ್ರಗಡ: ಕಳೆದ ಒಂದೂವರೆ ವರ್ಷದಿಂದ ಗಜೇಂದ್ರಗಡ ಸೇರಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಗುಡ್ಡದಲ್ಲಿಟ್ಟ ಸೋಮವಾರ ಬೋನಿಗೆ ಬಿದ್ದಿದೆ.

    ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ, ಪ್ಯಾಟಿ, ನೆಲ್ಲೂರ ಸೇರಿದಂತೆ ಕುಷ್ಟಗಿ ತಾಲೂಕಿನ ಗಡಚಿಂತಿ, ಮಾಲಗಿತ್ತಿ ಅಕ್ಕಪಕ್ಕದ ಗುಡ್ಡದಲ್ಲಿ ಚಿರತೆ ಓಡಾಡಿ ಹಸು, ಕುದುರೆ, ಕುರಿಗಳ ಮೇಲೆ ದಾಳಿ ಮಾಡಿತ್ತು.ಹೀಗಾಗಿ ರೈತರು ಜಮೀನಿನಲ್ಲಿ ಕೆಲಸ ಮಾಡಲು ಹಾಗೂ ಜಾನುವಾರುಗಳನ್ನು ಬಿಡಲೂ ಹಿಂದೇಟು ಹಾಕá-ತ್ತಿದ್ದರು. ಕೃಷಿ ಚಟುವಟಿಕೆಯಲ್ಲಿ ತೊಡಗá-ವ ರೈತರಲ್ಲಿ ಭಯದ ವಾತಾವರಣ ನಿರ್ವಣವಾಗಿತ್ತು.

    ಕಳೆದ ಸೆಪ್ಟೆಂಬರ್ 30 ರಂದು ಎರಡು ಹಸುಗಳನ್ನು ಚಿರತೆ ಬಲಿ ಪಡೆದಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ನಾಗೇಂದ್ರಗಡದಲ್ಲಿ ಎರಡು ಬೋನುಗಳನ್ನು ಇಡಲಾಗಿತ್ತು. ಅ.1 ರಂದು ರಾತ್ರಿ 3.30ಕ್ಕೆ ಚಿರತೆಯು ಬೋನಿನ ಹತ್ತಿರ ಅಲೆದಾಡಿತ್ತು. ಆಗಾಗ ಕುಷ್ಟಗಿ ತಾಲೂಕಿನ ಗುಡ್ಡದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ಕುಷ್ಟಗಿ ತಾಲೂಕಿನ ವಿವಿಧೆಡೆ ಅರಣ್ಯ ಇಲಾಖೆಯವರು ಬೋನುಗಳನ್ನು ಇಟ್ಟು ನಿರಂತರ ಶೋಧ ಕಾರ್ಯ ಮುಂದುವರಿಸಿದ್ದರು. ಇದೀಗ ಚಿರತೆ ಸೆರೆಯಾಗಿದ್ದರಿಂದ ಗಜೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಬೋನಿಗೆ ಬಿದ್ದ ಚಿರತೆಯ ತಪಾಸಣೆ ಮಾಡಲಾಗುತ್ತದೆ. ತಪಾಸಣೆಯಲ್ಲಿ ಚಿರತೆಗೆ ಯಾವುದೇ ರೀತಿಯ ಗಾಯವಾಗಿದ್ದು ಕಂಡು ಬಂದರೆ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಚಿಕಿತ್ಸೆ ನೀಡಲಾಗá-ತ್ತದೆ. ಯಾವುದೇ ಪೆಟ್ಟು ಇಲ್ಲದಿದ್ದರೆ ಕಾಡಿಗೆ ಬಿಡಲಾಗುತ್ತದೆ.
    | ಮಂಜುನಾಥ ಮೇಗಲಮನಿ, ಆರ್​ಎಫ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts