More

    ಕೊನೆಗೂ ಸೆರೆಯಾಯ್ತು ಹುಚ್ಚು ಕೋತಿ

    ಸಂಶಿ: ಹಲವು ದಿನಗಳಿಂದ ಸಂಶಿ-ಕಮಡೊಳ್ಳಿ ಮಾರ್ಗ ಮಧ್ಯದಲ್ಲಿ ಜನರ ಮೇಲೆ ಎರಗಿ ತೊಂದರೆ ನೀಡುತ್ತಿದ್ದ ಹುಚ್ಚು ಕೋತಿಯನ್ನು ಬುಧವಾರ ಸೆರೆ ಹಿಡಿದು ಸುರಕ್ಷಿತವಾಗಿ ಯಲ್ಲಾಪುರ ವಲಯ ವಡಗಡ್ಡಿ ನಾಕಾ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

    ಸಂಶಿ ಗ್ರಾಪಂ ಸಾರ್ವಜನಿಕರ ನೆರವಿನೊಂದಿಗೆ ವಾನರ ಸಂರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದರು. ಹೊಲಕ್ಕೆ ತೆರಳುತ್ತಿದ್ದ ಗ್ರಾಮದ ನಿವಾಸಿ ಹಾಗೂ ಕೂಲಿಕಾರ ಯಲ್ಲಪ್ಪ ಬಂಪ್ಲಿ ಎಂಬಾತನ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಕೋತಿ ಕಚ್ಚಿ ಗಾಯಗೊಳಿಸಿತ್ತು. ಅಲ್ಲದೆ, ಮಹಿಳೆಯರು, ಮಕ್ಕಳ ಮೇಲೆ ಎರಗಿ ಆತಂಕ ಸೃಷ್ಟಿಸಿತ್ತು. ಈ ಕುರಿತು ಆ. 13ರಂದು ‘ಕೋತಿ ಉಪಟಳಕ್ಕೆ ಜನ ಹೈರಾಣು’ ಶೀರ್ಷಿಕೆಯಡಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಸಾಮಾಜಿಕ ಕಳಕಳಿ ಮೆರೆದ ‘ವಿಜಯವಾಣಿ’ ಕಾರ್ಯಕ್ಕೆ ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ ಹಾಗೂ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಿಡಿಒ ಎಸ್.ವಿ. ಕಾಯಕದ, ಸತೀಶ ಪಾಟೀಲ, ಗ್ರಾಪಂ ಸಿಬ್ಬಂದಿ ಮತ್ತು ಕೃಷಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts