More

    ಸೇವಾ ಮನೋಭಾವ ಬೆಳೆಸಲು ರಹದಾರಿ

    ಸಂಶಿ: ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವುದೇ ಎನ್​ಎಸ್​ಎಸ್ ಮುಖ್ಯ ಉದ್ದೇಶವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
    ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಶಿ ಕೆಎಲ್​ಇ ಕಾಲೇಜ್ ವಿದ್ಯಾರ್ಥಿಗಳ ಎನ್​ಎಸ್​ಎಸ್ ಶಿಬಿರದಲ್ಲಿ ಅವರು ಚಾಲನೆ ನೀಡಿ ಮಾತನಾಡಿ ಮಹಾತ್ಮ ಗಾಂಧಿ ಅವರ ಕನಸಿನ ಕೂಸಾದ ಎನ್​ಎಸ್​ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನ ಸಿಗಲಿದ್ದು, ಸೇವಾ ಮನೋಭಾವ ಬೆಳೆಸುವ ಸುಗಮ ದಾರಿಯಾಗಿದೆ ಎಂದು ವಿವರಿಸಿದರು.
    ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿದ ರಾಷ್ಟ್ರ. ಆದರೆ, ಸರ್ಕಾರಗಳು ಹಳ್ಳಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಹಳ್ಳಿಗಳು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಹಳ್ಳಿಗಳ ಜನತೆ ಸರ್ಕಾರಗಳನ್ನು ಪ್ರಶ್ನಿಸುವಂತಾಗಬೇಕು ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
    ಕೆಎಲ್​ಇ ಕಾಲೇಜ್ ಅಧ್ಯಕ್ಷ ಎ.ಬಿ. ಉಪ್ಪಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಾವ್ಯ ಬಾರಕೇರ, ಉಪಾಧ್ಯಕ್ಷೆ ರೇಣವ್ವ ಮುದೇನಾಯ್ಕರ, ಸಿಐಸಿ ಸಂಸ್ಥೆ ನಿರ್ದೇಶಕ ಆರ್.ಎಫ್. ಭರಮಗೌಡ್ರ, ಚುಸಾಪ ತಾಲೂಕಾಧ್ಯಕ್ಷ ವೈ.ಡಿ. ಹೊಸೂರ, ತಮ್ಮನಗೌಡ ಯರಡ್ಡಿ, ಹನುಮಪ್ಪ ಗರಡಿ, ಎಂ.ಆರ್. ಯಲ್ಲರಡ್ಡಿ, ಮಂಜುನಾಥ ಕಂಠಿ, ಸೋಮಣ್ಣ ಮೇಟಿ, ಎನ್​ಎಸ್​ಎಸ್ ಕಾರ್ಯಕ್ರಮಾಧಿಕಾರಿ ಎಸ್.ಸಿ. ಅಂಗಡಿ ರಮೇಶ ಅತ್ತಿಗೇರಿ, ಮಧು ಗುಡಗೇರಿ, ವೈ.ಎಂ. ಶಿರೂರು, ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts