More

    ಕೊನೆಗೂ ಕಚೇರಿ ನಾಮಫಲಕ ಅಳವಡಿಕೆ

    ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಮಧ್ಯಾಹ್ನ ಬಿಸಿಯೂಟ ವಿತರಣಾ ವಿಭಾಗದ ಕಚೇರಿಗೆ ಬೆಳಗಾವಿ ತಾಲೂಕು ಪಂಚಾಯಿತಿ ಆವರಣದಲ್ಲಿನ ವಿಭಾಗಕ್ಕೆ ಕೊನೆಗೂ ಅಧಿಕಾರಿಗಳು ನಾಮಫಲಕ ಅಳವಡಿಸಿದ್ದಾರೆ.

    ಮಧ್ಯಾಹ್ನದ ಬಿಸಿ ಯೂಟ ವಿತರಣೆಗೆ ಸಂಬಂಧಿಸಿದಂತೆ ದೂರ ುಗಳ ಬಗ್ಗೆ ಪಾಲಕರು ಅಧಿಕಾರಿಗಳನ್ನು ಸಂಪರ್ಕಿಸುವುದು ಹಾಗೂ ಕಚೇರಿ ಹುಡುಕುವುದಕ್ಕೆ ಉಂಟಾಗುತ್ತಿದ್ದ ಗೊಂದಲದ ಬಗ್ಗೆ ವಿಜಯವಾಣಿ ಪತ್ರಿಕೆಯು ‘ಬೆಳಗಾವಿ ಅಕ್ಷರ ದಾಸೋಹ ಕಚೇರಿ ಹುಡುಕಿಕೊಡಿ!’ ಶೀರ್ಷಿಕೆಯಡಿ ಜು.9ರಂದು ಶನಿವಾರ ವಿಸ್ತೃತ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.

    ವರದಿಗೆ ಎಚ್ಚೆತ್ತುಕೊಂಡ ಜಿಲ್ಲಾಮಟ್ಟದ ಅಧಿಕಾರಿಗಳು ಸಂಬಂಧಿಸಿದ ಕಚೇರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದರು. ಕಚೇರಿ ಸಿಬ್ಬಂದಿ ಶನಿವಾರವೇ ಕಚೇರಿಯ ನಾಮಫಲಕ ಮಾಡಿಸಿದ್ದು, ಸೋಮವಾರ ಅಳವಡಿಸಿ, ಮಾಹಿತಿ ನೀಡಿದ್ದಾರೆ. ಅದೇ ಆವರಣದಲ್ಲಿರುವ ಅಂಗವಿಕಲರ ಮಾಸಾಶನ ಯೋಜನೆಗೆ ಸಂಬಂಧಿಸಿದ ಅಂಗವಿಕಲರ ವಿಭಾಗದ ಕಚೇರಿಗೂ ನಾಮಫಲಕ ಅಳವಡಿಸಿದ್ದಾರೆ.
    ಅಕ್ಷರ ದಾಸೋಹ ಕಚೇರಿಗೆ ಸೋಮವಾರ ವಿಜಯವಾಣಿ ಭೇಟಿ ನೀಡಿದ ಸಂದರ್ಭದಲ್ಲಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕರ ಕೊಠಡಿಯಲ್ಲಿಯೇ ನಾಮಫಲಕ ಇರಲಿಲ್ಲ. ಈ ಬಗ್ಗೆ ಸಹಾಯಕ ನಿರ್ದೇಶಕ ಆರ್.ಸಿ.ಮುದಕನಗೌಡರ ಗಮನಕ್ಕೆ ತಂದಾಗ, ತರಾತುರಿಯಲ್ಲಿ ಕಚೇರಿಯಲ್ಲೇ ಕಾಗದದಲ್ಲಿ ಮುದ್ರಿಸಿ ಅಂಟಿಸಿದರು. ಇನ್ನು ಬೆಳಗಾವಿ ತಾಲೂಕು ಪಂಚಾಯಿತಿ ಕಚೇರಿ, ತಾಲೂಕು ಅಕ್ಷರ ದಾಸೋಹ ಕಚೇರಿ ಮುಂಬಾಗದಲ್ಲೇ ರಾಶಿಗಟ್ಟಲೇ ಕಸ ಬಿದ್ದಿದ್ದ ಕಸವನ್ನೂ ವಿಲೇವಾರಿ ಮಾಡಲಾಗಿದೆ.

    ತಾಪಂ ಕಚೇರಿ ಆವರಣದಲ್ಲೇ ಕಚೇರಿ ಇರುವುದರಿಂದ ನಿರ್ಲಕ್ಷಿಸಲಾಗಿತ್ತು. ಆದರೆ, ಕಚೇರಿಗೆ ಆಗಮಿಸುವ ಜನತೆಗೆ ನಾಮಫಲಕ ಇಲ್ಲದೆ ಆಗುತ್ತಿರುವ ಗೊಂದಲದ ಬಗ್ಗೆ ಪತ್ರಿಕೆ ವರದಿ ಮೂಲಕ ಗಮನಕ್ಕೆ ಬಂದ ಕೂಡಲೇ ನಾಮಫಲಕ ಅಳವಡಿಸಲಾಗಿದೆ.
    | ಆರ್.ಸಿ.ಮುಕದನಗೌಡರ ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ ವಿಭಾಗ, ತಾಪಂ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts