More

    ಕೈ ಹಿಡಿದ ‘ವಿಜಯವಾಣಿ’ ಪತ್ರಿಕೆ ವಿತರಣೆ

    ರಾಣೆಬೆನ್ನೂರ: ಒಂದು ಸಮಯದಲ್ಲಿ ಪತ್ರಿಕೆ ವಿತರಣೆಯನ್ನು ಸಾಮಾನ್ಯ ಎಂದು ತಿಳಿದು ಆರಂಭಿಸಿದೆ. ಆದರೆ, ಕರೊನಾದಂತಹ ಮಹಾಮಾರಿ ರೋಗದಿಂದ ಎಲ್ಲ ಉದ್ಯಮ ಬಂದ್ ಆಗಿದ್ದರೂ ಪತ್ರಿಕೆ ವಿತರಣೆ ಮಾತ್ರ ನಿಲ್ಲಲಿಲ್ಲ. ಹೀಗಾಗಿ ಅಂದು ಸಾಮಾನ್ಯ ಎಂದು ತಿಳಿದ ಪತ್ರಿಕೆ ವಿತರಣೆ, ಇಂದು ಜೀವನ ನಡೆಸಲು ಕೈ ಹಿಡಿದಿದೆ…!

    ಇದು ‘ವಿಜಯವಾಣಿ’ ಪತ್ರಿಕೆ ವಿತರಕರಾದ ಹೀರಾಚಂದ ಘೊಡ್ಕೆ ಅವರ ಅಭಿಪ್ರಾಯ. ಎಂ.ಎ. ಪದವೀಧರರಾದ ಹೀರಾಚಂದ ಅವರು ಕಳೆದ ಎಂಟು ವರ್ಷದಿಂದ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಮಳೆ, ಚಳಿ ಎನ್ನದೇ ನಿತ್ಯ ಬೆಳಗ್ಗೆ 4 ರಿಂದ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗುತ್ತಾರೆ. ಈ ವೃತ್ತಿಯಿಂದ ಸಂಪಾದನೆ ಮಾತ್ರವಲ್ಲ, ಬೆಳ್ಳಂಬೆಳ್ಳಗ್ಗೆ ಎದ್ದು ಕೆಲಸದಲ್ಲಿ ತೊಡಗುವುದರಿಂದ ಆರೋಗ್ಯ ವೃದ್ಧಿಗೂ ಸಹಕಾರಿಯಾಗಿದೆ ಎಂದು ಹೀರಾಚಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

    ಕೈ ಹಿಡಿದ ‘ವಿಜಯವಾಣಿ’ ವಿತರಣೆ
    ಹೀರಾಚಂದ ಅವರು ರಿಯಲ್ ಎಸ್ಟೇಟ್ ಬಿಸಿನೆಸ್, ಟೂರ್ಸ್ ಆಂಡ್ ಟ್ರಾವೆಲ್ಸ್ ಹಾಗೂ ವಿಆರ್​ಎಲ್ ಟ್ರಾವೆಲ್ಸ್ ಸೇರಿ ವಿವಿಧ ಉದ್ಯಮ ಮಾಡುತ್ತ ಪತ್ರಿಕೆ ವಿತರಣೆಯನ್ನು ಶುರು ಮಾಡಿದ್ದರು. ನೋಟ್​ಬ್ಯಾನ್​ನಿಂದ ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ಕೈ ಚೆಲ್ಲಿತ್ತು. ನಂತರ ಕರೊನಾದಿಂದ ಟೂರ್ಸ್ ಆಂಡ್ ಟ್ರಾವೆಲ್ಸ್ ಸೇರಿ ಇತರ ಉದ್ಯಮಗಳು ಬಂದ್ ಆದವು. ಆದರೆ, ಪತ್ರಿಕೆ ವಿತರಣೆ ಮಾತ್ರ ಸ್ಥಗಿತಗೊಳ್ಳಲ್ಲಿಲ್ಲ. ಹೀಗಾಗಿ ನಿತ್ಯದ ಬದುಕಿಗೆ ಪತ್ರಿಕೆ ವಿತರಣೆ ಕೈ ಹಿಡಿದು ಮುನ್ನಡೆಸುತ್ತಿದೆ ಎಂದು ಹೀರಾಚಂದ ಅಭಿಮಾನದಿಂದ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts