More

    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ

    ಬೆಳಗಾವಿ: ತೌಕ್ತೆ ಚಂಡಮಾರುತದಿಂದ ಸಂಭವಿಸಿದ ಹಾನಿಗೆ ಗುಜರಾತ್ ರಾಜ್ಯಕ್ಕೆ ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದೀರಿ. ನಿಮ್ಮದೇ ಪಕ್ಷದ ಸರ್ಕಾರ ಇರುವ ಕರ್ನಾಟಕವನ್ನೇಕೆ ನಿರ್ಲಕ್ಷಿಸುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾ ನದಿ ಸ್ವಚ್ಛಗೊಳಿಸುತ್ತೇವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರು ನಾಯಕ ಎಂದು ಬಿಂಬಿಸಿಕೊಳ್ಳಲು ಮುಂದಾದರು. ಆದರೆ, ದೇಶದಲ್ಲಿ ಕರೊನಾ ಸೋಂಕು ತಡೆಗಟ್ಟಲು ವಿಲವಾಗಿದ್ದರಿಂದ ಅದೇ ಗಂಗಾ ನದಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಹೆಣಗಳು ತೇಲಿ ಬರುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

    ರಾಜ್ಯದಲ್ಲಿಯೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ ವ್ಯವಸ್ಥೆ ಕಲ್ಪಿಸಲು ವಿಶೇಷ ಅನುದಾನ ನೀಡಿಲ್ಲ. ಕೋವಿಡ್ ನಿಭಾಯಿಸಲು ಜಿಲ್ಲಾಧಿಕಾರಿಗಳ ಹೆಗಲಿಗೆ ಹೊಣೆಗಾರಿಕೆ ವಹಿಸಿದ್ದು ಎಷ್ಟರ ಮಟ್ಟಿಗೆ ಸರಿ? ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆ ತೋರಿಸಲು ಟೆಸ್ಟ್ ಸಂಖ್ಯೆ ಇಳಿಸಲಾಗಿದೆಯೇ ಹೊರತು ಸೋಂಕು ನಿಯಂತ್ರಣ ಸಾಧ್ಯವಾಗಿಲ್ಲ. ಪ್ರತಿ ಮನೆಗೂ ಕರೊನಾ ಹರಡಿದೆ. ಹೀಗಾಗಿ ಮನೆ ಮನೆಗೆ ಹೋಗಿ ಕರೊನಾ ಟೆಸ್ಟ್ ಮಾಡಬೇಕು ಎಂದರು. ರಾಜ್ಯ ಸರ್ಕಾರದಲ್ಲಿ ಕರೊನಾ ಎರಡನೇ ಅಲೆ ಸಮರ್ಥವಾಗಿ ನಿಭಾಯಿಸುವ ಆರೋಗ್ಯ ಸಚಿವರಿಲ್ಲ. ಬೆಡ್‌ಗೆ ಒಬ್ಬರು, ಆಕ್ಸಿಜನ್‌ಗೆ ಒಬ್ಬರು, ಲಸಿಕೆಗೆ ಒಬ್ಬರು ಹೀಗೆ ಎಲ್ಲದಕ್ಕೂ ಪ್ರತ್ಯೇಕ ಸಚಿವರಿದ್ದಾರೆ. ಆದರೂ, ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲ. ಸಾವಿನ ಲೆಕ್ಕ ನೀಡುತ್ತಿರುವ ಆರೋಗ್ಯ ಸಚಿವ ಸುಧಾಕರ ಅವರಿಗೆ ತವರು ಜಿಲ್ಲೆಯ ನೈಜ ಅಂಕಿಂಶಗಳೇ ಗೊತ್ತಿಲ್ಲ ಎಂದು ಟೀಕಿಸಿದರು.

    ಜಿಲ್ಲೆಯವರಿಗೇ ಉಸ್ತುವಾರಿ ನೀಡಿ: ಬಿಜೆಪಿ ಎಂಎಲ್ಎ ಇರುವ ತಾಲೂಕುಗಳಿಗೆ ಹೆಚ್ಚಿನ ಲಸಿಕೆ, ಬೇರೆ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಹಂಚಿಕೆ ವಿಚಾರದಲ್ಲಿ ಪಕ್ಷಪಾತ ಮಾಡಬಾರದು. ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಸೇರಿ ನಾಲ್ವರು ಮಂತ್ರಿಗಳಿದ್ದರೂ ಸೋಂಕು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಳಗಾವಿ ಜಿಲ್ಲೆಯವರೇ ಉಸ್ತುವಾರಿ ವಹಿಸಿದ್ದರೆ ಈ ತಾರತಮ್ಯದ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಜಿಲ್ಲೆಯ ಯಾವ ನಾಯಕರಿಗೂ ಉಸ್ತುವಾರಿ ವಹಿಸುವ ಸಾಮರ್ಥ್ಯ ಇಲ್ಲವೇ ಎಂದು ಶಾಸಕಿ ಹೆಬ್ಬಾಳ್ಕರ್‌ಪ್ರಶ್ನಿಸಿದರು.

    ರಾಜ್ಯದ ರೈತರಿಗೆ ನೀಡುತ್ತಿರುವ ಲಾಕ್‌ಡೌನ್ ಪರಿಹಾರ ಯಾವುದಕ್ಕೂ ಸಾಲದು. ರೈತರು ಈಗಾಗಲೇ ಪಡೆದ ಸಾಲದ ಬಡ್ಡಿ ಮನ್ನಾ ಮಾಡಬೇಕು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 10 ಲಕ್ಷ ರೂ. ಸಾಲ ನೀಡಬೇಕು. ಹಾಗಾದಾಗ ಮಾತ್ರ ರೈತರು ಈ ಸಂಕಷ್ಟದಿಂದ ಹೊರಬರಲು ಸಾಧ್ಯ.
    | ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿ, ಬೆಳಗಾವಿ ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts