More

    ಕೆ.ಆರ್. ನಗರ ಪುರಸಭೆ ಉಳಿತಾಯ ಬಜೆಟ್ ಮಂಡನೆ

     ಕೆ.ಆರ್.ನಗರ: ಪಟ್ಟಣದ ಪುರಸಭೆಯ ಸ್ಥಾಯಿ ಸ್ಥಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್ ಅವರು ಶುಕ್ರವಾರ ಪುರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲೀನ ಆಯವ್ಯಯ ಮಂಡನೆ ಸಭೆಯಲ್ಲಿ 27 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

    ಆರಂಭ ಶಿಲ್ಕು 7.14 ಕೋಟಿ ರೂ., ರಾಜಸ್ವ ಸ್ವೀಕೃತಿಗಳು 11.71 ಕೋಟಿ ರೂ., ರಾಜಸ್ವ ಪಾವತಿಗಳು 10.78 ಕೋಟಿ ರೂ., ರಾಜಸ್ವ ಖಾತೆಯಲ್ಲಿನ ಹೆಚ್ಚುವರಿ ಬಾಬ್ತು 93.20 ಲಕ್ಷ ರೂ., ಬಂಡವಾಳ ಸ್ವೀಕೃತಿಗಳು 8.56 ಕೋಟಿ ರೂ., ಬಂಡವಾಳ ಪಾವತಿಗಳು 10.62 ಕೋಟಿ ರೂ., ಬಂಡವಾಳ ಖಾತೆಯಲ್ಲಿನ ಕೊರತೆ 2.06 ಕೋಟಿ ರೂ. ಹಾಗೂ ಉಳಿತಾಯ 27.02 ಲಕ್ಷ ರೂ.ಗಳು., ಆಸ್ತಿ ತೆರಿಗೆಯಿಂದ 2.14 ಕೋಟಿ ರೂ. ಆದಾಯ ನಿರೀಕ್ಷೆ, ನೀರಿನ ತೆರಿಗೆ 75 ಲಕ್ಷ ರೂ., ಪುರಸಭೆ ಮಳಿಗೆಯಿಂದ 72.58 ಲಕ್ಷ ರೂ., ಉದ್ದಿಮೆ ಪರವಾನಗಿ 11 ಲಕ್ಷ ರೂ., ಕಟ್ಟಡ ಪರವಾನಗಿ, ಮೇಲ್ವಿಚಾರಣೆ, ಖಾತೆ ಬದಲಾವಣೆಗಳಿಂದ 1.31 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

    ಆಯವ್ಯಯ ಕುರಿತು ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ಕೋಳಿ ಪ್ರಕಾಶ್, ನಟರಾಜ್, ಕೆ.ಜಿ. ಸುಬ್ರಮಣ್ಯ ಮಾತನಾಡಿದರು. ಅಧ್ಯಕ್ಷ ಸೈಯದ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸೌಮ್ಯಾ ಲೋಕೇಶ್, ಸದಸ್ಯರಾದ ಶಂಕರ್‌ಸ್ವಾಮಿ, ಸಂತೋಷ್‌ಗೌಡ, ಶಿವುನಾಯಕ್, ಜಾವೀದ್‌ಪಾಷ, ಮಂಜುಳಾ ಚಿಕ್ಕವೀರು, ವಸಂತಮ್ಮ, ಮುಖ್ಯಾಧಿಕಾರಿ ಡಾ. ಜಯಣ್ಣ, ಕಂದಾಯಾಧಿಕಾರಿ ರಮೇಶ್, ಇಂಜಿನಿಯರ್‌ಗಳಾದ ಚಂದ್ರಶೇಖರ್, ಸೌಮ್ಯಾ, ರೀತುಸಿಂಗ್, ಆರೋಗ್ಯ ನೀರಿಕ್ಷಕರಾದ ರಾಜೇಂದ್ರ, ಲೊಕೇಶ್ ಇನ್ನಿತರರು ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts