More

    ಕೆಲ್ಸ ಮಾಡಿದೋನ್ನ ಸೋಲ್ಸಿದ್ರಿ.. ಈ ನೋವು ಈಗ್ಲೂ ಕಾಡ್ತಿದೆ ನನ್ನನ್ನ: ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂತಪ್ಪ ಎಂದ ಕಾಗೋಡು

    ಸಾಗರ: ನನ್ನ ರಾಜಕೀಯ ಬದುಕಿನಲ್ಲಿ ನಿಮಗೋಸ್ಕರ(ಜನರು) ಕೆಲಸ ಮಾಡಿಕೊಂಡು ಬಂದೆ. ಆದ್ರೆ ನೀವು ಕಳೆದ ಚುನಾವಣೆಯಲ್ಲಿ ನನ್ನ ಸೋಲ್ಸಿ ಬೆಂಗ್ಳೂರಲ್ಲಿ ಮದ್ಯದ ಅಂಗಡಿ ಇಟ್ಟುಕೊಂಡು ಹಣ ಮಾಡಿದೋರ‌್ನ ಗೆಲ್ಸಿದ್ರಿ… ಈ ನೋವು ಈಗ್ಲೂ ನನ್ನನ್ನ ಕಾಡ್ತಿದೆ… ಪ್ರಜಾಪ್ರಭುತ್ವ ವ್ಯವಸ್ಥೆ ಈ ಸ್ಥಿತಿಗೆ ಬಂದು ತಲುಪಿತಲ್ಲಾ ಎಂಬ ಚಿಂತೆಯಾಗಿದೆ…
    ಕಳೆದ ವಿಧಾನಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಗೋಡು ತಿಮ್ಮಪ್ಪ ಮತ್ತೊಂದು ಚುನಾವಣೆ ಹೊಸ್ತಿಲಲ್ಲಿ ಇರುವಾಗ ಮನದ ನೋವನ್ನು ಹಂಚಿಕೊಂಡಿದ್ದಾರೆ.
    ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಸಮಕಾಲೀನ ಒಡನಾಡಿ ಕಾಗೋಡು ತಿಮ್ಮಪ್ಪ ಅವರಿಗೆ ಬ್ಲಾಕ್ ಕಾಂಗ್ರೆಸ್‌ನಿಂದ ಇಲ್ಲಿನ ಗಾಂಧಿ ಮಂದಿರದಲ್ಲಿ ಶುಕ್ರವಾರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
    ಈ ಸಮಾರಂಭದಲ್ಲಿ ಮನದಾಳವನ್ನು ತೆರೆದಿಟ್ಟ ಕಾಗೋಡು ತಿಮ್ಮಪ್ಪ, ನಾನು ಹಣ ಮಾಡಿಲ್ಲ. ಅಧಿಕಾರ ಇದ್ದಾಗ ಜನರ ಹಕ್ಕು ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಅಧಿಕಾರ ಇಲ್ಲದಿದ್ದಾಗ ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಅಕ್ರಮ ಮಾಡದಿರುವುದು, ದುಡ್ಡು ಮಾಡದೆ ಇರುವುದು ತಪ್ಪಾಯ್ತಾ ಎಂದು ಪ್ರಶ್ನಿಸಿದರು.
    ಈಗ ಕ್ಷೇತ್ರದ ಅಭಿವೃದ್ದಿ ನಿಂತ ನೀರಾಗಿದೆ. ಒಂದೇ ಒಂದು ಬಗರ್‌ಹುಕುಂ ಹಕ್ಕುಪತ್ರ ಕೊಟ್ಟಿಲ್ಲ, ರಸ್ತೆ ಮಾಡಿಸಿಲ್ಲ. ಗಣಪತಿ ಕೆರೆ ಸ್ವಚ್ಚಗೊಳಿಸಿ, ಮೇಲ್ಭಾಗದಲ್ಲಿ ಬಾವುಟ ನೆಟ್ಟಿದ್ದೆ ಅಭಿವೃದ್ದಿ ಎನ್ನುವಂತಾಗಿದೆ. ಅಭಿವೃದ್ದಿ ಎಂದರೆ ಯಾವುದು ಎನ್ನುವುದನ್ನು ಜನ ಸರಿಯಾಗಿ ತಿಳಿದುಕೊಳ್ಳಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಅವಕಾಶ ಸಿಕ್ಕಾಗ ಜನಪರವಾಗಿ, ಜಾತ್ಯತೀತವಾಗಿ ಕೆಲಸ ಮಾಡುವ ಮನಸ್ಥಿತಿ ನಮ್ಮದಾಗಬೇಕು. ಗೌರವ ಎನ್ನುವುದು ನಾವು ಮಾಡುವ ಕೆಲಸದ ಮೂಲಕ ಮೂಡಿ ಬರಬೇಕೇ ಹೊರತು ಅದು ತನ್ನಷ್ಟಕ್ಕೆ ತಾನೇ ಸಿಗುವ ವಸ್ತು ಅಲ್ಲ ಎಂದರು.
    ಅವರಲ್ಲಿ ಶಕ್ತಿ ಇದೆ:  ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವ ಶಕ್ತಿ ಇದೆ. ನಾವೆಲ್ಲ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು. ಕನ್ನಡಿಗರೊನ್ನಬರು ಪಕ್ಷದ ಅತ್ಯುನ್ನತ ಹುದ್ದೆಗೇರಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts