More

    ಕೆರೆಗಳ ನಿರ್ಲಕ್ಷ್ಯದಿಂದ ಬತ್ತುತ್ತಿದೆ ಅಂತರ್ಜಲ

    ಬೇಲೂರು: ತಾಲೂಕಿನ ಸೋಂಪುರ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಯನ್ನು ಹಸಿರು ಭೂಮಿ ಪ್ರತಿಷ್ಠಾನ, ಜ್ಞಾನ ವಿಜ್ಞಾನ ಸಮಿತಿ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಮತ್ತು ಸೋಂಪುರ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಪಕ್ಕದಲ್ಲಿ ಗಿಡ ನೆಡಲಾಯಿತು.
    ಹಸಿರು ಭೂಮಿ ಪ್ರತಿಷ್ಠಾನದ ಟ್ರಸ್ಟಿ, ಸಾಹಿತಿ ರೂಪಾ ಹಾಸನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆ ಬಾಗಿಲಿಗೆ ನೀರು ಬರುತ್ತಿರುವುದರಿಂದ ಸಾರ್ವಜನಿಕರು ಕೆರೆ, ಕಟ್ಟೆ ಸೇರಿ ಕಲ್ಯಾಣಿಗಳನ್ನು ನಿರ್ಲಕ್ಷೃ ಮಾಡಿದ್ದಾರೆ. ಇದರಿಂದ ಅಂತರ್ಜಲ ಬತ್ತುತ್ತಿದ್ದು ಎಲ್ಲೆಡೆ ನೀರಿಗೆ ಬರ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಅಂತರ್ಜಲ ವೃದ್ಧಿಗೆ ಕೆರೆ ಕಟ್ಟೆ, ಕಲ್ಯಾಣಿಗಳಲ್ಲಿ ನೀರು ತುಂಬುವಂತೆ ಮಾಡಬೇಕು. ಇಂಥ ಮಹತ್ತರ ಕಾರ್ಯಕ್ಕೆ ಈಗಾಗಲೇ ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ಗ್ರಾಪಂಯೊಂದಿಗೆ ಕೈಜೋಡಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಹಸಿರು ಭೂಮಿ ಪ್ರತಿಷ್ಠಾನ ಮುಂದಾಗಿದೆ ಎಂದು ಹೇಳಿದರು.
    ಪ್ರತಿಷ್ಠಾನದ ಖಜಾಂಚಿ ಅಹಮದ್ ಹಗರೆ ಮಾತನಾಡಿ, ನೀರಿನ ಸಂರಕ್ಷಣೆ ಮಾಡಲು ಕೆರೆ, ಕಲ್ಯಾಣಿ ಜತೆ ಒಡನಾಟ ಇಟ್ಟುಕೊಂಡು ಗ್ರಾಮ ಸ್ವರಾಜ್ಯ ಸಮಿತಿ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
    ಪ್ರತಿಷ್ಠಾನದ ಉಪಾಧ್ಯಕ್ಷೆ ಸೌಭಾಗ್ಯ, ಗ್ರಾಪಂ ಪಿಡಿಒ ರಾಜಶೇಖರ್, ಕಾರ್ಯದರ್ಶಿ ಆರಾಧ್ಯ, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ಬಿ.ಎಲ್.ಲಕ್ಷ್ಮಣ್, ನಿರ್ದೇಶಕ ಧನಂಜಯ, ಗ್ರಾಮಸ್ಥರಾದ ಉಮೇಶ್, ಅಣ್ಣಪ್ಪ, ನೀಲಾ, ಪ್ರಕಾಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts