More

    ಕೆರೆಗಳಿಗೆ ನೀರು ಹರಿಸುವ ಯೋಜನೆಗೆ 25 ಕೋಟಿ ಅನುದಾನ

    ನುಗ್ಗೇಹಳ್ಳಿ: ತಿಪಟೂರು ಭಾಗದಲ್ಲಿ ಹರಿಯುವ ಹೇಮಾವತಿ ನಾಲೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ಹೋಬಳಿಯ ಸಂತೆಶಿವರ, ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ರಾಜ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ದೊರೆತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

    ಹೋಬಳಿಯ ಯಾಚನಘಟ್ಟ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಸಂತೆಶಿವರ ಗ್ರಾಮದ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರಿಶ್ರಮದಿಂದ ತಿಪಟೂರು ಭಾಗದ ಹೇಮಾವತಿ ನಾಲೆಯಿಂದ ನೀರು ಹರಿಸುವ ಯೋಜನೆಗೆ ಸರ್ಕಾರ 25 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಾಗಲೇ ನವಿಲೆ ಏತನೀರಾವರಿ ಯೋಜನೆಯ ಮೂಲಕ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಿಲ್ಲದ ಕಾರಣ ಈ ಯೋಜನೆಗೆ ಸರ್ಕಾರ ಒತ್ತು ನೀಡಿದೆ ಎಂದರು.

    ಯಾಚನಘಟ್ಟ ಹಾಗೂ ದುಗ್ಗೇನಹಳ್ಳಿ ಕೆರೆಗಳಿಗೆ ಕಳೆದ ವರ್ಷದಿಂದ ಪೈಪ್‌ಲೈನ್ ಮೂಲಕ ಸಂತೆಶಿವರ ಕೆರೆಯಿಂದ ನೀರು ಹರಿಸಲಾಗುತ್ತಿದ್ದು, ಈ ವರ್ಷ ಹೆಚ್ಚು ಮಳೆಯಿಂದ ಕೆರೆ ಸಂಪೂರ್ಣ ತುಂಬಿದೆ. ಕೆರೆಯ ಕೋಡಿ ಭಾಗದ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದು, ಅನುದಾನದ ಲಭ್ಯತೆ ನೋಡಿಕೊಂಡು ಮುಂಬರುವ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

    ಗ್ರಾ.ಪಂ. ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಪ್ರಜ್ವಲ್, ಸದಸ್ಯರಾದ ಕುಮಾರ್, ಹೊಸಹಳ್ಳಿ ಲೋಕೇಶ್, ಮುಖಂಡರಾದ ದೊರೆಸ್ವಾಮಿ, ಕುಳ್ಳೇಗೌಡ, ಹುಲ್ಲೇನಹಳ್ಳಿ ನಾರಾಯಣ್, ಲೋಕೇಶ್, ವಳಗೇರಹಳ್ಳಿ ಮಂಜಣ್ಣ, ಸಂತೋಷ್, ಚಿರಂಜೀವಿ, ನರೇನಹಳ್ಳಿ ಶೇಖರ್, ಕಿರಣ್, ಕುಮಾರ್ ದುಗ್ಗೇನಹಳ್ಳಿ, ಯತೀಶ್, ರತ್ನಮ್ಮ, ಮಹಾಲಿಂಗಪ್ಪ, ಡೇರಿ ಕಾರ್ಯದರ್ಶಿ ಗುರುಪ್ರಸಾದ್, ಅರ್ಚಕ ಸಂಪತ್ ಅಯ್ಯಂಗಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts