More

    ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿ ಮುಂಭಾಗ ರೈತರ ಪ್ರತಿಭಟನೆ

    ಆಲಮಟ್ಟಿ: ಜಲಾಶಯದ ವ್ಯಾಪ್ತಿಯ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕದ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಆಲಮಟ್ಟಿಯ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

    ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯ ಇಂಜಿನಿಯರ್ ಎಚ್.ಎಸ್.ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಲಾಯಿತು.

    ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಿಂಗರಾಜ ಆಲೂರ ಮಾತನಾಡಿ, ಆಲಮಟ್ಟಿ ಜಲಾಶಯ ವ್ಯಾಪ್ತಿಯ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಕೆಬಿಜೆಎನ್‌ಎಲ್ ಸಿಇ ಕಚೇರಿ ಮುಂದೆ ಉಪವಾಸ ನಡೆಸಲಾಗುವುದು ಎಂದರು.

    ಈ ಮೊದಲು ಹರಿಸಿದ ನೀರಿನಲ್ಲಿ ಶೇ.35 ರಷ್ಟು ಮಾತ್ರ ಕೆರೆಗೆ ಬಂದಿದೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶೇ.50 ರಷ್ಟು ನೀರು ಭರ್ತಿ ಮಾಡಲಾಗುವುದು ಎಂದು ಸಭೆಯಲ್ಲಿ ತಿರ್ಮಾನಿಸಿದ್ದರು. ಆದರೆ ಕೇವಲ ಶೇ.30 ರಷ್ಟು ಮಾತ್ರ ಕೆರೆಗಳಿಗೆ ನೀರು ಹರಿಸಿದ್ದಾರೆ. ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಹಿಂದೆ ಭರ್ತಿ ಮಾಡಿದ ನೀರು ಖಾಲಿಯಾಗಿದ್ದು ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದರು.

    ಪ್ರತಿಭಟನೆ ವೇಳೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು. ನಂತರ ಪ್ರಾದೇಶಿಕ ಆಯುಕ್ತರೊಂದಿಗೆ ಮಾತನಾಡಿದ ಮುಖ್ಯ ಇಂಜಿನಿಯರ್ ಅವರು, ೆ.12 ರಂದು ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಭಟನಾ ನಿರತ ರೈತರು ಪ್ರತಿಕ್ರಿಯಿಸಿ, ೆ.12 ರಂದು ನೀರು ಹರಿಸಲು ಪ್ರಾರಂಭಿಸದಿದ್ದರೆ ಮರುದಿನ ಕಚೇರಿ ಎದುರು ಉಪವಾಸ ನಡೆಸುತ್ತೇವೆ ಎಂದರು.

    ಸದಾಶಿವ ಭರಟಗಿ, ಹೊನಕೇರೆಪ್ಪ ತೆಲಗಿ, ವಿಠಲ ಬಿರಾದಾರ, ಈರಣ್ಣ ದೇವರಗುಡಿ, ಸೀತಪ್ಪ ಗಣಿ, ಮಲ್ಲಿಗೆಪ್ಪ ಸಾಸನೂರ, ರಾಮಣ್ಣ ಮನ್ಯಾಳ, ಶಿವಪ್ಪ ಪಾಟೀಲ, ರ‌್ಯಾವಪ್ಪಗೌಡ ಪೋಲೆಶಿ, ರಮೇಶ ಗೌಡರ, ಸಂತೋಷ ಪಾಟೀಲ, ಸುಭಾಷ ಬಿರಾದಾರ, ರಾಜು ನದ್ಾ, ಜಂಬಲು ಲಮಾಣಿ, ಲಕ್ಷ್ಮಣ ಬಿರಾದಾರ, ರಾಮಣ್ಣ ಸೀತಿಮನಿ, ರೇವಣಸಿದ್ದ ಸಾಸನೂರ, ಮಸ್ಯಾಖ ಹಳ್ಳೂರ, ರಾಚಪ್ಪ ಉಕ್ಕಲಿ, ಸುಭಾಷ ಚೋಪಡೆ, ಲಾಲಸಾ ಹಳ್ಳೂರ, ಪಾರ್ವತಿ ಲಮಾಣಿ, ಶಾಂತಾಬಾಯಿ ಮಡಿವಾಳರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts