More

    ಕೆಡಿಪಿ ಸಭೆಯಲ್ಲಿ ವಿಜಯವಾಣಿ ಪ್ರತಿಧ್ವನಿ; ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದ್ದೇನು ಗೊತ್ತಾ?

    ವಿಜಯಪುರ: ಆರೋಗ್ಯ ಸೇವೆಯಲ್ಲಾಗುತ್ತಿರುವ ವ್ಯತ್ಯಯ, ಸಾರ್ವನಿಕರಿಗಾಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ‘ವಿಜಯವಾಣಿ’ ವರದಿ ಪ್ರಸ್ತಾಪಿಸಿ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಅವಾಂತರದ ಬಗ್ಗೆ ಹಿರಿಯ ಆರೋಗ್ಯ ಅಧಿಕಾರಿಗಳನ್ನು ಲೆಫ್ಟ್‌ರೈಟ್ ತೆಗೆದುಕೊಂಡರಲ್ಲದೇ ಕೂಡಲೇ ಲೋಪ ಸರಿಪಡಿಸಲು ತಾಕೀತು ಮಾಡಿದರು.
    ಸಾರ್ವಜನಿಕರಿಗೆ ಸಕಾಲಕ್ಕೆ, ಸಮರ್ಪಕವಾಗಿ ಆರೋಗ್ಯ ಸೇವೆ ಸಿಗಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕೆಂದು ಖಡಕ್ ಆಗಿ ಸೂಚಿಸಿದರು.
    ಈ ಆಸ್ಪತ್ರೆಯಲ್ಲಿ ನಿಗದಿ ಪಡಿಸಿದ ಗುರಿಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳಬೇಕು. 100 ಹಾಸಿಗೆ ಆಸ್ಪತ್ರೆ ಇದಾಗಿರುವುದರಿಂದ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು. ಸೂಕ್ತ ವೈದ್ಯರನ್ನು ನಿಯೋಜಿಸುವ ಮತ್ತು ಇತರೆ ವ್ಯವಸ್ಥೆ ಸುಧಾರಣೆಗೆ ವಿಶೇಷ ಗಮನ ನೀಡಲು ಅವರು ಸೂಚನೆ ನೀಡಿದರು.
    ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹಾಗೂ ಸಿಇಒ ಗೋವಿಂದ ರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts