More

    ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಶೌಚಗೃಹ ನಿರ್ಮಾಣ

    ಗುಂಡ್ಲುಪೇಟೆ: ಬಂಡೀಪುರದ ಮಾರ್ಗವಾಗಿ ಸಾಗುವ ಪ್ರಯಾಣಿಕರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಶೌಚಗೃಹ ನಿರ್ಮಿಸುತ್ತಿದೆ.

    ಬಂಡೀಪುರದಿಂದ ಮಧುಮಲೈಗೆ ತೆರಳುವ ರಸ್ತೆ ಮಾರ್ಗದಲ್ಲಿ ಆಧುನಿಕ ಶೌಚಗೃಹ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಬಂಡೀಪುರ ಅರಣ್ಯಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧಿಕೃತ ಪಾರ್ಕಿಂಗ್ ನಿರ್ಬಂಧಿಸಲಾಗಿದೆ. ಆದರೆ, ಈ ರಸ್ತೆಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರವಾಸಿಗರಲ್ಲಿ ರೋಗಿಗಳು, ಮಧುಮೇಹಿಗಳು ಮೂತ್ರ ವಿಸರ್ಜನೆಗೆ ಅರಣ್ಯದ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸುತ್ತಿದ್ದರು. ಅಲ್ಲದೇ, ಅರಣ್ಯ ಪ್ರದೇಶದೊಳಗೆ ಗಂಟೆಗಟ್ಟಲೆ ಪ್ರಯಾಣಿಸುವ ಮಹಿಳೆಯರು, ಮಕ್ಕಳು ಸಹ ತೊಂದರೆ ಎದುರಿಸುತ್ತಿದ್ದರು. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಅರಿವಿಲ್ಲದೆ ಕೆಳಗಿಳಿದು ಮೂತ್ರ ವಿಸರ್ಜನೆಗೆ ಕಾಡಿನೊಳಗೆ ಹೋಗುತ್ತಿದ್ದು, ಇದರಿಂದ ವನ್ಯಜೀವಿಗಳಿಂದ ದಾಳಿಗೊಳಗಾಗುವ ಅಪಾಯ ಎದುರಾಗುತ್ತಿತ್ತು. ಅಲ್ಲದೇ, ಅನಧಿಕೃತವಾಗಿ ನಿಲ್ಲಿಸಿದ ವಾಹನಗಳಿಗೆ ದಂಡ ವಿಧಿಸುತ್ತಿದ್ದರು.
    ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿದ್ದ ಹಳೇ ಕಟ್ಟಡದಲ್ಲಿ ರೆಸ್ಟ್ ರೂಂ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಶಿಥಿಲವಾಗುತ್ತಿದ್ದ ಕಟ್ಟಡವನ್ನು ನವೀಕರಿಸಿ ಶೌಚಗೃಹ, ನೀರು ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ಸೋಲಾರ್ ಅಳವಡಿಸುತ್ತಿದೆ. ಇದರಿಂದ ಮೈಸೂರಿನಿಂದ ಊಟಿಯತ್ತ ಹೋಗಿಬರುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರವಾಸಿಗರು ಸಂತಸವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts