More

    ಕೆಎಲ್‌ಇ ಶಾಲೆಯಲ್ಲಿ ಕಲಾ ಪ್ರದರ್ಶನ

    ಬೆಳಗಾವಿ: ಕೆಎಲ್‌ಇ ಇಂಟರ್‌ನ್ಯಾಷನಲ್ (ಸಿಬಿಎಸ್ಸಿ) ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಕಲಾ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ. ವಿ.ಎಸ್. ಸಾಧುನವರ ಹೇಳಿದ್ದಾರೆ.

    ಇತ್ತೀಚೆಗೆ ಕುವೆಂಪು ನಗರದ ಕೆಎಲ್‌ಇ ಇಂಟರ್‌ನ್ಯಾಷನಲ್ (ಸಿಬಿಎಸ್ಸಿ) ಶಾಲೆಯಲ್ಲಿ 3ನೇ ತರಗತಿಯಿಂದ 12 ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ವಿವಿಧ ಬಣ್ಣಗಳಿಂದ ಚಿತ್ರಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನೇಕ ವಿದ್ಯಾರ್ಥಿಗಳು ನಿಸರ್ಗ ಸೌಂದರ್ಯವನ್ನು ತಮ್ಮ ಕುಂಚಗಳಲ್ಲಿ ಸೆರೆ ಹಿಡಿದಿದ್ದಾರೆ.

    ಕೆಲವು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ರೈಲ್ವೆ ಚಲಿಸುವ ಚಿತ್ರ, ಶ್ರೀಕೃಷ್ಣ ಕೊಳಲು ನುಡಿಸುವ ದೃಶ್ಯ, ಆಕರ್ಷಕ ಕಟ್ಟಡಗಳ ನೀಲಿನಕ್ಷೆ, ಪೆನ್ಸಿಲ್ ಮೂಲಕ ಮಹಾತ್ಮ ಗಾಂಧೀಜಿಯ ಭಾವಚಿತ್ರ ಸೇರಿದಂತೆ ಅನೇಕ ೇಂಟಿಂಗ್ ಚಿತ್ರಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಗಿದ್ದವು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಈ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ದೇಸಾಯಿ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಮಕ್ಕಳು ಅತ್ಯಂತ ಮನೋಜ್ಞವಾಗಿ ಚಿತ್ರಗಳನ್ನು ಬಿಡಿಸಿದ್ದಾರೆ. ಅಲ್ಲದೆ, ಹಳೆಯ ಕಾಲದ ರೇಡಿಯೋ, ಬೀಸುವ ಕಲ್ಲು, ಟೈಪ್‌ರೈಟರ್, ಹಳೇ ಪಾತ್ರೆ, 1905ನೇ ಸಾಲಿನ ಬ್ರಿಟಿಷರ ಕಾಲದ ನಾಣ್ಯಗಳು ಸೇರಿದಂತೆ ವಸ್ತು ಪ್ರದರ್ಶನದಲ್ಲಿ ಇಡಲಾಗಿದ್ದ ವಸ್ತುಗಳು ಕೂಡ ಅಪರೂಪವಾಗಿದ್ದವು ಎಂದು ಡಾ.ದೇಸಾಯಿ ಅವರು ಹೇಳಿದ್ದಾರೆ.

    ಈ ಕಲಾ ಪ್ರದರ್ಶನದಲ್ಲಿ ಡಾ.ಪ್ರೀತಿ ದೊಡವಾಡ, ಕೆಎಲ್‌ಇ ನಿರ್ದೇಶಕ ಬಿ.ಆರ್. ಪಾಟೀಲ, ಕೆಎಲ್‌ಇ ಇಂಟರ್‌ನ್ಯಾಷನಲ್ (ಸಿಬಿಎಸ್ಸಿ) ಶಾಲೆಯ
    ಪ್ರಾಚಾರ್ಯೆ ದೀಪ್ತಿ ಇಂಗಳೆ, ಹಿಂದಿ ಶಿಕ್ಷಕಿ ಭಾರತಿ ನಾಗನೂರ, ಕಲಾ ಶಿಕ್ಷಕಿ ಪೂಜಾ ಚವ್ಹಾಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts