More

    ಕೆಎಲ್‌ಇ ಟೆಕ್ ವಿವಿಯಲ್ಲಿ ಸೀಡ್‌ಲ್ಯಾಬ್

    ಹುಬ್ಬಳ್ಳಿ: ಸ್ಯಾಮ್‌ಸಂಗ್ ವಿಶ್ವಮಟ್ಟದ ಕೃತಕ ಬುದ್ಧಿಮತ್ತೆ ಮಷಿನ್ ಲರ್ನಿಂಗ್ ಮತ್ತು ಡೇಟಾ ಇಂಜಿನಿಯರಿಂಗ್ ಪ್ರಯೋಗಾಲಯವನ್ನು ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗಿದೆ.

    ಯುವ ವಿದ್ಯಾರ್ಥಿಗಳಿಗೆ ಉದಯೋನ್ಮುಖ ಅತ್ಯಾಧುನಿಕ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಮತ್ತು ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಪ್ರಯೋಗಾಲಯವು ಅಪರೂಪದ ಅವಕಾಶ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

    ರಾಜ್ಯದಲ್ಲಿ ಪ್ರಥಮ ‘ಸ್ಯಾಮ್‌ಸಂಗ್ ಸ್ಟೂಡೆಂಟ್ ಇಕೊಸಿಸ್ಟಂ ಫಾರ್ ಇಂಜಿನಿಯರ್ಡ್‌ ಡೇಟಾ(ಎಸ್‌ಇಇಡಿ- ಸೀಡ್)’ ಲ್ಯಾಬ್ ಇದಾಗಿದೆ. ಇದರಿಂದ, ಕೆಎಲ್‌ಇ ಟೆಕ್‌ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬೆಂಗಳೂರಿನ ಸ್ಯಾಮ್‌ಸಂಗ್ ಆರ್ ಆ್ಯಂಡ್ ಡಿ ಇನ್‌ಸ್ಟಿಟ್ಯೂಟ್‌ನ ಹಿರಿಯ ಇಂಜಿನಿಯರ್‌ಗಳೊಂದಿಗೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಮೊಬೈಲ್ ಕ್ಯಾಮರಾ ತಂತ್ರಜ್ಞಾನ, ಮಾತು ಮತ್ತು ಟೆಕ್ಸ್ಟ್ ಗುರುತಿಸುವಿಕೆ, ಮಷಿನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದಾಗಿದೆ.

    ಕೆಎಲ್‌ಇ ಟೆಕ್‌ನಲ್ಲಿ ಈ ಸಹಯೋಗದ ಸಂಶೋಧನಾ ಯೋಜನೆಗಳು ಮೂರನೆಯ ಹಾಗೂ ನಾಲ್ಕನೆಯ ವರ್ಷದ ಬಿ.ಟೆಕ್ ಮತ್ತು ಎಂ.ಟೆಕ್ ವಿದ್ಯಾರ್ಥಿಗಳು ಮತ್ತು ಪಿಎಚ್.ಡಿ. ಸಂಶೋಧಕರಿಗೆ ಮುಕ್ತವಾಗಿರುತ್ತವೆ. ಸ್ಯಾಮ್‌ಸಂಗ್ಸೀ ಡ್ ಲ್ಯಾಬ್ 3,000 ಚದರ ಅಡಿ ವಿಸ್ತೀರ್ಣ ಹೊಂದಿದೆ ಮತ್ತು ಡಿವೈಸ್‌ಗಳು, ಅಕ್ಸೆಸರಿಗಳು, ಚಿತ್ರದ ಗುಣಮಟ್ಟ ವಿಶ್ಲೇಷಣೆ ಸಾಧನಗಳು ಮತ್ತಿತರ ಮಲ್ಟಿಮೀಡಿಯಾ ಮೇಲೆ ಸಂಶೋಧನೆಗಳನ್ನು ನಿರ್ವಹಿಸಲು ಬೆಳಕಿನ ಸಾಧನ ಹೊಂದಿದ ವಿಶೇಷ ಡಾರ್ಕ್ ರೂಮ್ ಮುಂತಾದ ಸೌಲಭ್ಯ ಹೊಂದಿದೆ.

    ಭಾರತವು ಯುವ ಮಿಲೆನಿಯಲ್‌ಗಳು ಮತ್ತು ಜೆನ್ ಜಡ್ (6ರಿಂದ 24 ವರ್ಷದ) ಪ್ರತಿಭೆಗಳ ಖಣಿಯಾಗಿದೆ. ಈ ಪ್ರಯೋಗಾಲಯವನ್ನು ದೇಶದ ಆವಿಷ್ಕಾರದ ವ್ಯವಸ್ಥೆಯನ್ನು ಉತ್ತೇಜಿಸುವ, ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸನ್ನದ್ಧಗೊಳಿಸುವ ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಕೇಂದ್ರವಾಗಿಸುವ ಗುರಿ ಹೊಂದಿದ್ದೇವೆ.

    ಇದು ತನ್ನ ಪವರಿಂಗ್ ಡಿಜಿಟಲ್ ಇಂಡಿಯಾದ ಗುರಿಯ ಬದ್ಧತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಎಂದು ಬೆಂಗಳೂರಿನ ಸ್ಯಾಮ್‌ಸಂಗ್ ಆರ್ ಆ್ಯಂಡ್ ಡಿ ಇನ್‌ಸ್ಟಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ದೀಪೇಶ್ ಷಾ ಹೇಳಿದ್ದಾರೆ. ಇಂದು ನಮ್ಮ ವಿಶ್ವವು ಹೆಚ್ಚು ಡೇಟಾ ಕೇಂದ್ರಿತವಾಗುತ್ತಿದೆ. ಕೃತಕ ಬುದ್ಧಿಮತ್ತೆಯೊಂದಿಗೆ ನಾವು ಜೀವಿಸುವ, ಕೆಲಸ ಮಾಡುವ ಮತ್ತು ವ್ಯಾಪಾರ ಮಾಡುವ ವಿಧಾನವನ್ನು ಇದು ಬದಲಾಯಿಸಲಿದೆ. ಸ್ಯಾಮ್‌ಸಂಗ್ ಸೀಡ್ ಲ್ಯಾಬ್ ಮಹತ್ತರ ಉಪಕ್ರಮವಾಗಿದೆ.

    ವಿಶ್ವ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸಂಶೋಧನಾ ಯೋಜನೆಗಳೊಂದಿಗೆ ಕೆಲಸ ಮಾಡಲು ಇಂಜಿನಿಯರ್‌ಗಳಿಗೆ ಅವಕಾಶ ನೀಡುತ್ತದೆ ಎಂದು ಕೆಎಲ್‌ಇ ಟೆಕ್ನಾಲಜಿಕಲ್ ಯುನಿವರ್ಸಿಟಿಯ ಕುಲಪತಿ ಡಾ. ಅಶೋಕ್ ಶೆಟ್ಟರ್ ಹೇಳಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts