More

    ಕೆಆರ್‌ಎಸ್ ಹಿನ್ನೀರಿಗೆ 6 ಲಕ್ಷ ಮೀನು ಮರಿ

    ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ಕಾವೇರಿ ನದಿ ಹಿನ್ನೀರಿಗೆ ಕೆ.ಆರ್.ಸಾಗರ ಜಲಾಶಯ ಫಿಶ್ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿ ಲಿ. ವತಿಯಿಂದ ಸೋಮವಾರ 6 ಲಕ್ಷ ಮೀನು ಮರಿಗಳನ್ನು ಬಿಡಲಾಯಿತು.

    ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷ ಕೆ.ನರಸಿಂಹ ಮತ್ತು ಕಂಪನಿ ಅಧ್ಯಕ್ಷ ಕೆ.ರಾಜು ಮೀನು ಮರಿ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಹಿನ್ನೀರಿಗೆ ಬಿಡಲಾಗಿರುವ ಮೀನುಮರಿಗಳು ಸಾಲುವುದಿಲ್ಲ್ಲ ಎಂದು ಸಂಘದ ವತಿಯಿಂದ ಗೌರಿ, ರೋಹು, ಕಾಟ್ಲ, ಮುರಗಾಲ್ ತಳಿಯ ಮೀನುಮರಿಗಳನ್ನು ಅಭಿವೃದ್ಧಿಪಡಿಸಿಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ತಳಿಯ ಹತ್ತು ಲಕ್ಷ ಮೀನು ಮರಿಗಳನ್ನು ಬಿಡಲಾಗುವುದು. ಮೀನು ಅಭಿವೃದ್ಧಿ ಹೊಂದಿದ ನಂತರ ಸಂಘದ ಸುಮಾರು 450 ಕ್ಕೂ ಹೆಚ್ಚು ಸದಸ್ಯರು ತಮಗೆ ನಿಗದಿಪಡಿಸಿದ ಜಾಗದಲ್ಲಿ ಮೀನು ಹಿಡಿದು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ ಎಂದು ಕೆ.ರಾಜು ತಿಳಿಸಿದರು.

    ಕಂಪನಿ ಸಿಇಒ ಸಚಿನ್ ದೇವ್, ನಿರ್ದೇಶಕರಾದ ಈ.ಮಹದೇವನಾಯಕ, ಮಂಜುನಾಥ್, ಆಸೀಫ್ ಖಾನ್, ಆಶೋಕ್, ಸ್ವಾಮಿ, ಆರ‌್ಮುಗಂ, ವೆಂಕಟೇಶ, ರೇವಣ್ಣ, ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯರಾದ ಪ್ರಕಾಶ್ ಮತ್ತು ಮಂಜುನಾಥ್ ಇತರರು ಇದ್ದರು.

    ನಮ್ಮ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಕೆ.ಆರ್.ಸಾಗರ ಅಣೆಕಟ್ಟೆ ಹಿನ್ನೀರಿಗೆ 10 ಲಕ್ಷ ಮೀನುಮರಿ ಬಿಡಲಾಗುವುದು. ಅಣೆಕಟ್ಟೆ ವ್ಯಾಪ್ತಿ ಹೆಚ್ಚು ಇರುವ ಕಾರಣ ಮೀನುಗಾರರು ತಾವೇ ಸೊಸೈಟಿ ರಚಿಸಿಕೊಂಡು ಲಕ್ಷಾಂತರ ಮೀನುಮರಿಗಳನ್ನು ಬಿಡುತ್ತಾರೆ.
    ಶಿವಕುಮಾರ್, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಕೆ.ಆರ್.ಸಾಗರ ಅಣೆಕಟ್ಟು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts