More

    ಕೃಷಿ ಪತ್ತಿನ ಸಂಘಗಳ ಬೇಡಿಕೆ ಈಡೇರಿಸಿ, ಕ್ಷೇಮಾಭಿವೃದ್ಧಿ ಮಹಾಮಂಡಳದ ಪದಾಧಿಕಾರಿಗಳ ಆಗ್ರಹ

    ಹುಬ್ಬಳ್ಳಿ: ಗ್ರಾಮೀಣರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರಿಗೆ ನ್ಯಾಯಯುತ ಸೌಲಭ್ಯಗಳು ಸಿಗದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ- ಬ್ಯಾಂಕ್​ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಡಿ.ಎಸ್. ಬಡಗಿಗೌಡ್ರ ದೂರಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಗಳಿಗೆ ಸಾಲಗಳ ಮಾರ್ಜಿನ್ ಹಣವನ್ನು ಸರ್ಕಾರ ಕಡಿತ ಮಾಡಿದೆ. ಇದು ಕನಿಷ್ಠ ಶೇ. 3ರಷ್ಟು ಇರಬೇಕು. ಯಶಸ್ವಿನಿ ಯೋಜನೆಯಲ್ಲಿ ಸಂಘಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಯಾವುದಕ್ಕೂ ಸಾಲುವುದಿಲ್ಲ. ಸಿಬ್ಬಂದಿ ಪ್ರೋತ್ಸಾಹ ಧನ 10 ರೂ. ಕಟ್ಟಲು ಸರ್ಕಾರ ಹೇಳಿದೆ. ಇದನ್ನು ಕನಿಷ್ಠ 25 ರೂ. ಗೆ ಹೆಚ್ಚಿಸಬೇಕು.

    ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೆ ಸರ್ಕಾರದ ಸೇವಾ ಭದ್ರತೆ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

    ಮಹಾಮಂಡಳ ನಿರ್ದೇಶಕ ಜನಾರ್ದನ ಪಾಟಕರ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲ ವ್ಯವಹಾರ, ಡೇಟಾಗಳನ್ನು ಕಂಪ್ಯೂಟರೀಕರಣ ಮಾಡಬೇಕು. ಪಾರದರ್ಶಕ ವ್ಯವಹಾರ ನಡೆಸಲು ಇದರಿಂದ ಸಹಕಾರಿಯಾಗುತ್ತದೆ. ಜತೆಗೆ ಸಹಕಾರ ಇಲಾಖೆ ಮೂಲಕವೇ ಇದರ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದರು.

    ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಮಾತನಾಡಿ, ಎಲ್ಲ ಬೇಡಿಕೆಗಳನ್ನು ಸರ್ಕಾರ ಡಿ. 5ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಷ್ಕರ ನಡೆಸಲಾಗುವುದು. ರಾಜ್ಯದ 5,600 ಸಂಘ ಸಂಸ್ಥೆಗಳ ಸುಮಾರು 30 ಸಾವಿರ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳುವರು ಎಂದರು.

    ಜಿಲ್ಲಾಧ್ಯಕ್ಷ ಕಲ್ಲನಗೌಡ್ರ, ಉಮಾಪತಿ, ದೇವಕುಮಾರ ಎನ್.ಎಚ್. ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts