More

    ಕೃಷಿ ಕ್ಷೇತ್ರದ ಬಗ್ಗೆ ಹಿಂಜರಿಕೆ ಬೇಡ- ಎ.ಎಸ್.ನಿರಂಜನ

    ದಾವಣಗೆರೆ: ಪದವೀಧರರಾದರೂ ಕೃಷಿ ಕ್ಷೇತ್ರ ಪ್ರವೇಶಿಸಲು ಹಿಂಜರಿಕೆ ಬೇಡ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜನ ಹೇಳಿದರು.
    ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವೇದಿಕೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
    ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಪಡೆದು ಭಾಗವಹಿಸಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಿ. ಇದಕ್ಕಾಗಿ ಮೊಬೈಲ್ ಚಟದಿಂದ ದೂರವಿದ್ದು ವಿದ್ಯಾರ್ಜನೆಯ ಕಡೆಗೆ ಗಮನ ನೀಡಿರಿ ಎಂದು ಹೇಳಿದರು.
    ಸಾಧನೆಯ ಹಾದಿಗೆ ಪ್ರೇರೇಪಿಸುವ ಶಿಕ್ಷಣವು ಇಂದು ಅಗತ್ಯವಾಗಿದೆ. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವು ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.
    ಶಿಕ್ಷಣದ ಜತೆಯಲ್ಲೇ ನಾಯಕತ್ವ ಗುಣ, ಸೋದರತ್ವ ಭಾವ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ರೂಪಣೆಗೆ ಶಿಕ್ಷಣ ಒಂದೇ ಸಾಲದು. ಪಠ್ಯೇತರ ಚಟುವಟಿಕೆಗಳಲ್ಲಿನ ಅನುಭವವೂ ಪೂರಕವಾಗಿ ಬೇಕು ಎಂದು ಹೇಳಿದರು.
    ಸಮಾರೋಪ ಭಾಷಣ ಮಾಡಿದ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಎಚ್.ದೊಡ್ಡಗೌಡರ್, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದೇ ಸಾಧನೆಯಲ್ಲ. ನಿಮ್ಮಲ್ಲಿನ ವಿಶೇಷತೆಯನ್ನು ಗುರುತಿಸಿಕೊಂಡು ಅದನ್ನು ಪ್ರತಿಭೆಯಾಗಿ ಮಾರ್ಪಡಿಸಿಕೊಳ್ಳಬೇಕು ಎಂದರು.
    ಸ್ನೇಹ, ವಾಹನ ಹಾಗೂ ಮೊಬೈಲ್ ಮೋಹದ ಬಗ್ಗೆ ಜಾಗೃತರಾಗಿರಬೇಕು, ಇದು ಅತಿಯಾದರೆ ಹಾದಿ ತಪ್ಪುವ ಸಂಭವವಿದೆ. ಅಭ್ಯಾಸಕ್ಕೆ ಸಮಯ ನಿಗದಿಪಡಿಸಿಕೊಂಡು ವೇಳಾಪಟ್ಟಿಯಂತೆ ಶಿಸ್ತುಬದ್ಧವಾಗಿ ವ್ಯಾಸಂಗ ಮಾಡಬೇಕು. ಓದನ್ನು ತಪಸ್ಸು ಎಂದು ತಿಳಿಯಬೇಕೆ ಹೊರತು ಭಯಪಡಬಾರದು ಎಂದರು.
    ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಪಿ. ರುದ್ರಪ್ಪ ಮಾತನಾಡಿ ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆಗಳು ಜೀವನ ಪರೀಕ್ಷೆಗೆ ಅವಶ್ಯಕ. ಓದು ಶಾಲಾ ಪರೀಕ್ಷೆಗೆ ಅವಶ್ಯ ಎಂದರು.
    ವಿವಿಧ ಸ್ಪರ್ಧೆಗಳ ವಿಜೇತರಿಗೆ ಯುವ ನಟ ಪೃಥ್ವಿ ಶಾಮನೂರು ಬಹುಮಾನ ವಿತರಿಸಿದರು. ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳಾದ ಶ್ರೀದೇವಿ, ಗೌತಮ್, ಸಚಿನ್, ಕೀರ್ತಿ, ದರ್ಶನ್, ಪಾಟೀಲ್, ಅಂಜಿನಿ, ಸಿಂಧು, ದೀಪಿಕಾ, ಅರುಣ್, ಪ್ರೀತಿ, ಬೀರೇಶ್ ಇದ್ದರು.
    ಕೀರ್ತಿ- ಸಹನಾ ಕಾರ್ಯಕ್ರಮ ನಿರೂಪಿಸಿದರು. ಜಯಶೀಲಾ ಪ್ರಾರ್ಥನೆ ಹಾಡಿದರು.ಭಾವನಾ ಸ್ವಾಗತಿಸಿದರು. ಮಹಮ್ಮದ್ ಹುಜೇಫಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts